ಬೆಂಗಳೂರು: ಬಾಂಗ್ಲಾದೇಶದಲ್ಲಿ ಕೊಲೆ ಮಾಡಿಗಳೂರಿನ ಬೊಮ್ಮಹಳ್ಳಿಯಲ್ಲಿ ಅಡಗಿದ್ದ ಆರೋಪಿಯನ್ನ ಬಾಂಗ್ಲಾ ಪೊಲೀಸರು ಬಂಧಿಸಿದ್ದಾರೆ. ಉಗ್ರ ಸಂಘಟನೆ ಅಲ್ ಖೈದಾ ಜೊತೆಗೂ ಆರೋಪಿ ಸಂಪರ್ಕ ಹೊಂದಿದ್ದ ಎಂದು ಶಂಕಿಸಲಾಗಿದೆ.
ಫೈಜಲ್ ಅಹಮದ್ ಬಂಧಿತ ಕೊಲೆ ಆರೋಪಿಯಾಗಿದ್ದು ಬಾಂಗ್ಲ ಮತ್ತು ಕೋಲ್ಕತ್ತಾ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಜುಲೈ 1ರಂದು ನಗರದ ಬೊಮ್ಮನಹಳ್ಳಿಯಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ. ಕ್ಯಾಬ್ ಚಾಲಕನಾಗಿ ಕೆಲಸ ಮಾಡ್ತಿದ್ದ ಆರೋಪಿ ಫೈಜಲ್ 2015ರ ಮೇ 12ರಂದು ಬಾಂಗ್ಲಾದ ಸಿಲೆಟ್‌ನಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಫೈಜಲ್ ಸಹಿತ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಫೈಜಲ್‌ಗಾಗಿ ಬಾಂಗ್ಲಾ ಪೊಲೀಸರ ಹುಡುಕಾಟ ನಡೆಸಿದ್ರು. ಮದರಸಾಗಳಿಗೆ ತೆರಳಿ ಜಿಹಾದಿ ಬಗ್ಗೆ ಪ್ರವಚನ ನೀಡ್ತಿದ್ದ ಫೈಜಲ್, ಜೂನ್ ಭಾರತದಲ್ಲಿ ಇರುವ ಬಗ್ಗೆ ಬಾಂಗ್ಲಾ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ಕೋಲ್ಕತ್ತಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದ ಬಾಂಗ್ಲಾ ಪೊಲೀಸರು ಕೋಲ್ಕತ್ತಾ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನ ಬಂಧಿಸಿ ಬಾಂಗ್ಲಾದೇಶಕ್ಕೆ ಕರೆದೊಯ್ದಿದ್ದಾರೆ.
PublicNext
07/07/2022 09:14 pm