ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: SIS ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಶಂಕಿತ ಉಗ್ರನ ಬಂಧನ

ಬೆಂಗಳೂರು: SIS ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಹೊಂದಿದ್ದ ವ್ಯಕ್ತಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಮೊಹಮ್ಮದ್ ತಾಕಿರ್ (33) ಎಂಬಾತನನೇ ಬಂಧಿತನಾದ ಶಂಕಿತ ಉಗ್ರ. ಬೆಂಗಳೂರು ಮೂಲದ ಈತ ನಿಷೇಧಿತ ISIS, ISIL, Daesh ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ದೊರೆತಿದೆ.

2020ರ ಏಪ್ರಿಲ್​ನಲ್ಲಿ ಅಹ್ಮದ್ ಅಬ್ದುಲ್ ಖಾದರ್, ಇರ್ಫಾನ್ ನಾಸಿರ್​ ಎಂಬ ತಾಕಿರ್‌ನ ಇಬ್ಬರು ಸಹಚರರನ್ನು ಬಂಧಿಸಲಾಗಿತ್ತು. NIA ಅಧಿಕಾರಿಗಳು ಈ ಬಗ್ಗೆ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಇದೇ ಕೇಸ್ ತನಿಖೆ ನಡೆಸುವಾಗ ಮೊಹಮ್ಮದ್ ತಾಕಿರ್ ಬಗ್ಗೆ ಸುಳಿವು ಸಿಕ್ಕಿದೆ. ಈತ ನಿಷೇಧಿತ ಸಂಘಟನೆಗಳಿಗೆ ಫಂಡಿಂಗ್ ಮಾಡಿಸುತ್ತಿದ್ದ. ಮುಸ್ಲಿಂ ಯುವಕರನ್ನು ಪ್ರೇರೇಪಿಸುತ್ತಿದ್ದ. ಕ್ವಾರನ್ ಹೆಸರಿನ ಗ್ರೂಪ್​ಗೆ ನೇಮಕ ಮಾಡಿದ ಬಳಿಕ ಯುವಕರನ್ನ ಅಕ್ರಮವಾಗಿ ಸಿರಿಯಾಗೆ ಕಳುಹಿಸುತ್ತಿದ್ದ. ಅಲ್ಲಿ ಉಗ್ರ ಸಂಘಟನೆ ISISಗೆ ಸೇರಲು ಪ್ರಚೋದಿಸುತ್ತಿದ್ದ. 2013ರಲ್ಲಿ ತನ್ನ ಸಹಚರರೊಂದಿಗೆ ಸಿರಿಯಾಗೆ ಭೇಟಿ ಕೊಟ್ಟಿದ್ದ ತಾಕಿರ್, ಭಾರತೀಯ ಮುಸ್ಲಿಮರಿಂದ ನೆರವು ಕೊಡಿಸೋದಾಗಿ ಉಗ್ರ ಸಂಘಟನೆಗಳಿಗೆ ತಿಳಿಸಿದ್ದ ಎಂಬ ಮಾಹಿತಿ ತನಿಖೆ ವೇಳೆ ದೊರೆತಿದೆ.

Edited By : Nagaraj Tulugeri
Kshetra Samachara

Kshetra Samachara

24/10/2021 11:14 pm

Cinque Terre

516

Cinque Terre

0

ಸಂಬಂಧಿತ ಸುದ್ದಿ