ರಾಜ್ಯದಲ್ಲಿ ಮೊತ್ತಮೊದಲ ಬಾರಿಗೆ ಅಮೆರಿಕ ಪ್ರಜೆಗಳಿಗೆ ಬ್ಯಾಂಕ್ ಹೆಸ್ರಲ್ಲಿ ವಂಚನೆ ಮಾಡ್ತಿದ್ದ ಬೃಹತ್ ಜಾಲವನ್ನು ವೈಟ್ ಫೀಲ್ಡ್ ಉಪವಿಭಾಗ ಪೊಲೀಸ್ರು ಬೇಧಿಸಿದ್ದಾರೆ. ಸಾಫ್ಟ್ ವೇರ್ ಕಂಪನಿ ಸೋಗಿನಲ್ಲಿ ಅಮೆರಿಕ ಪ್ರಜೆಗಳನ್ನು ಟ್ರ್ಯಾಪ್ ಮಾಡಿ ಆನ್ ಲೈನ್ ಫ್ರಾಡ್ ಮಾಡ್ತಿದ್ದ ಜಾಲ ಪತ್ತೆಯಾಗಿದೆ. ಈ ಆರೋಪಿಗಳು ತಮ್ಮ ಎಂಪ್ಲೈಸ್ ಗಳನ್ನ ಸ್ಕೂಲ್ ವ್ಯಾನ್
ನಲ್ಲಿ ಪಿಕ್ ಅಪ್ ಆಂಡ್ ಡ್ರಾಪ್ ಮಾಡ್ತಿದ್ರು.
ವೈಟ್ ಫೀಲ್ಡ್ ನ ಗಾಯತ್ರಿ ಟೆಕ್ ಪಾರ್ಕ್ ನಲ್ಲಿ ಏಥಿಕಲ್ ಇನ್ ಫೋ ಪ್ರೈ.ಲಿ. ಹೆಸ್ರಲ್ಲಿ ಕಂಪನಿ ತೆರೆದಿದ್ದ ಆರೋಪಿಗಳು ನೂರಾರು ಟೆಲಿಕಾಲ್ಸ್ ಮೂಲಕ ಯುಎಸ್ ಪ್ರಜೆಗಳನ್ನು ಸಂಪರ್ಕ ಮಾಡ್ತಿದ್ರು. ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಆಗಿದ್ಯಾ? ಅಂತ ಮಾತು ಶುರು ಮಾಡ್ತಿದ್ದ ಆರೋಪಿಗಳು, ಹಣ ವಾಪಸ್ ಬರಬೇಕು ಅಂದ್ರೆ ಒಂದಷ್ಟು ಪ್ರೊಸಿಜರ್ ಫಾಲೋ ಮಾಡಬೇಕು ಅಂತ ಹಂತ ಹಂತವಾಗಿ ಬ್ಯಾಂಕ್ ಹೆಸ್ರನ್ನ ಬಳಕೆ ಮಾಡಿ ಗ್ರಾಹಕರಿಂದ ಅಮೆಜಾನ್ ನಲ್ಲಿ ಲಕ್ಷಗಳ ಗಿಫ್ಟ್ ಕಾರ್ಡ್ ಖರೀದಿ ಮಾಡಿಸಿ ಹಣ ಸಂಪಾದನೆ ಮಾಡ್ತಿದ್ರು.
ಈ ಪ್ರಕರಣ ಸಂಬಂಧ ಆರೋಪಿಗಳಾದ ರಿಷಿ ವ್ಯಾಸ್, ಪ್ರತೀಕ್, ಪರೀಶ್, ಹೇತ್ ಪಟೇಲ್, ಕಿರಣ್, ಸೈಯ್ಯದ್ ಸೇರಿ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ನೂರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಈ ಆರೋಪಿಗಳು ಗುಜರಾತ್ ಮೂಲದವರಾಗಿದ್ದು, ಕಳೆದ 2 ವರ್ಷಗಳಿಂದಲೂ ಈ ಅಕ್ರಮ ನಡೆಸ್ತಿದ್ರು.
ಸದ್ಯ, ಪ್ರಕರಣ ಹಿನ್ನೆಲೆ ಅಮೆರಿಕ ರಾಯಭಾರಿ ಬಳಿ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದು, ಆರೋಪಿಗಳು ಯುಎಸ್ ಪ್ರಜೆಗಳನ್ನು ಟಾರ್ಗೆಟ್ ಮಾಡ್ತಿದ್ದ ಉದ್ದೇಶ ಏನು? ಇವ್ರಿಗೆ ನಂಬರ್ ಯಾರು ಕೊಡ್ತಿದ್ರು ಎಂದು ವಿಚಾರಣೆ ನಡೆಸ್ತಿದ್ದಾರೆ. ಕಂಪನಿ ಯಲ್ಲಿ ಕೋಟಿ ಕೋಟಿ ಹಣ ವಂಚನೆ ಮಾಡಿರೋ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ಸಿಐಡಿ ಹೆಗಲಿಗೆ ಹೋಗೋ ಸಾಧ್ಯತೆ ಇದೆ.
- ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
08/07/2022 06:15 pm