ಬೆಂಗಳೂರು: ಕಾಟನ್‌ಪೇಟೆ ಬಳಿಯಲ್ಲಿರುವ ಭಕ್ಷಿ ಗಾರ್ಡನ್‌ನಲ್ಲಿ ತಡರಾತ್ರಿ ಅದೊಂದು ಅನುಮಾನಕ್ಕೆ ಸಣ್ಣದೊಂದು ಗಲಾಟೆ ನಡೆದು ಶ್ರೀನಿವಾಸ್ ಎಂಬಾತ ಕೊಲೆಯಾಗಿದ್ದಾನೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ ಒಂಟಿಯಾಗಿ ಭಕ್ಷಿ ಗಾರ್ಡನ್ ನಲ್ಲಿ ವಾಸವಾಗಿದ್ದ. ಅದೇ ಏರಿಯಾದ ಸಂತೋಷ್ ಎಂಬವನ ಪತ್ನಿಯ ಜೊತೆ ಹೆಚ್ಚು ಸಲುಗೆ ಹೊಂದಿದ್ದನಂತೆ. ಈ ವಿಚಾರಕ್ಕೆ ಪತಿ ಸಂತೋಷ್ ವಿರೋಧ ವ್ಯಕ್ತಪಡಿಸಿ ಹಲವು ಬಾರಿಶ್ರೀನಿವಾಸ್ ಜೊತೆ ಜಗಳ ಮಾಡಿ ಕೈ ಕೈ ಮಿಲಾಯಿಸಿದ್ರು. ಭಾನುವಾರ ಸಂತೋಷ್ ಕಂಠಪೂರ್ತಿ ಕುಡಿದು ಶ್ರೀನಿವಾಸ್ ಜೊತೆ ಮತ್ತೆ ಕಿರಿಕ್ ತೆಗೆದು ತಲೆಗೆ ಮರದ ತುಂಡಿನಿಂದ ಬಲವಾಗಿ ಹೊಡೆದಿದ್ದಾನೆ. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದು, ಇಂದು ಬೆಳಿಗ್ಗೆ ಶ್ರೀನಿವಾಸ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಇನ್ನು ಸಣ್ಣ ಪುಟ್ಟ ಕೆಲಸ ಮಾಡ್ತಿದ್ದ ಶ್ರೀನಿವಾಸ್ ಗೆ ಕೆಲಸದ ಜಾಗದಲ್ಲಿ ಸಂತೋಷ್ ಪತ್ನಿ ಜೊತೆಯೇ ಹೆಚ್ಚು ಒಡನಾಟ ಹೊಂದಿದ್ದನಂತೆ. ಇದೇ ವಿಚಾರ ಪತಿ ಸಂತೋಷನ ಕೋಪ ನೆತ್ತಿಗೇರುವಂತೆ ಮಾಡಿತ್ತು. ಈ ವಿಚಾರವಾಗಿ ಹಲವಾರು ಬಾರಿ ಜಗಳ ಆದಾಗ ಸ್ಥಳೀಯರು ಬುದ್ಧಿ ಹೇಳಿದ್ದರೂ ಪ್ರಯೋಜನವಾಗಿಲ್ಲ. ಇನ್ನು ಶ್ರೀನಿವಾಸ್ ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಟನ್ ಪೇಟೆ ಪೊಲೀಸರು ಇದೀಗ ಆರೋಪಿ ಸಂತೋಷನನ್ನ ಬಂಧಿಸಿದ್ದಾರೆ.
ಒಟ್ಟಿನಲ್ಲಿ ಅನೈತಿಕ ಸಂಬಂಧದ ಕಿಡಿ ಇದೀಗ ಕೊಲೆಯೆಂಬ ಅಂತ್ಯಾಕ್ಷರಕ್ಕೆ ನಾಂದಿಹಾದಿದೆ. ಒಬ್ಬರು ಕೊಲೆಯಾದ್ರೆ ಮತ್ತೊಬ್ಬರು ಜೈಲು ಸೇರಿದ್ದಾರೆ.
PublicNext
02/08/2022 10:14 am