ಬೆಂಗಳೂರು: ಈ ರೀತಿ ರಸ್ತೆ ಮೇಲೆ ಕುಳಿತು ತಾನು ಮಾಡಿರುವ ಡ್ರಾಯಿಂಗ್‌ಗಳನ್ನು ಜನರಿಗೆ ತೋರಿಸುತ್ತಿರುವ ವ್ಯಕ್ತಿಯ ಹೆಸರು ಮೂರ್ತಿ. ಈತ ಮೂಲತಃ ತಮಿಳುನಾಡಿನ ತೂತುಕುಡಿ ನಿವಾಸಿ. ಇವರಿಗೆ ಕಣ್ಣು ಕೂಡ ಕಾಣುವುದಿಲ್ಲ. ಆದರೂ ಡ್ರಾಯಿಂಗ್ ಪೇಂಟಿಂಗ್ ಮಾಡುತ್ತಾರೆ. ಆದರೆ ಇವರ ಜೀವನ ಸಂಪೂರ್ಣವಾಗಿ ಕತ್ತಲಾಗಿದೆ.
ಹಾಮೇಶ ಎಂಬಾತ ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ಸುಳ್ಳು ಹೇಳಿ ಮೂರ್ತಿ ಅವರನ್ನು ತೂತುಕುಡಿಯಿಂದ ಕರೆದುಕೊಂಡು ಬಂದು ಬಿಟ್ಟಿದ್ದಾನೆ. ಆದರೆ ಮೂರ್ತಿ ಬಳಿ ಇದ್ದ ಹಣವನ್ನು ಆ ಪಾಪಿ ಕಿತ್ತುಕೊಂಡು ಹೋಗಿದ್ದಾನೆ. ಇದರಿಂದಾಗಿ ಮೂರ್ತಿ ಪರಿಚಿತ ಜನರೇ ಇಲ್ಲದ ಬೆಂಗಳೂರಿನಲ್ಲಿ ಅನಾಥವಾಗಿದ್ದಾರೆ.
ಮೂರ್ತಿಗೆ ಈಗ ಹಿಂದೆ ಮುಂದೆ ಯಾರು ಇಲ್ಲ. 2004ರಲ್ಲಿ ತೂತುಕುಡಿಯಲ್ಲಿ ಬಂದ ಸುನಾಮಿಗೆ ಮೂರ್ತಿಯ ಕುಟುಂಬ ಸುನಾಮಿಯ ಅಲೆಗಳಲ್ಲಿ ಕೊಚ್ಚಿಕೊಂಡು ಹೋದರಂತೆ. ಆದರೆ ಮೂರ್ತಿ ಮಾತ್ರ ಉಳಿದಿದ್ದು, ತೂತುಕುಡಿಯಲ್ಲೇ ಕೂಲಿ ಕೆಲಸ ಮಾಡಿಕೊಂಡಿದ್ದರು. ಈಗ ಒಂದು ತಿಂಗಳಿನಿಂದ ಬೆಂಗಳೂರಿನ ಗಲ್ಲಿಗಲ್ಲಿ ತಿರುಗುತ್ತಿರುವ ಮೂರ್ತಿ ಊರಿಗೆ ಹೋಗಲು ಕೈಯಲ್ಲಿ ಕಾಸು ಕೂಡ ಇಲ್ಲದೆ ಊಟ ಮಾಡದೆ ರಸ್ತೆ ಮೇಲೆ ತಲೆಸುತ್ತಿ ಬಿದ್ದಿದ್ದರು. ಅವರನ್ನು ಸ್ಥಳೀಯರು ಮತ್ತು ಪಬ್ಲಿಕ್ ನೆಕ್ಸ್ಟ್ ತಂಡ ಗಮನಿಸಿ ಮತ್ತೆ ಊರಿಗೆ ಹೋಗಲು ವ್ಯವಸ್ಥೆ ಮಾಡಿ ಬಸ್ ಹತ್ತಿಸಿ ಕಳುಹಿಸಿಕೊಟ್ಟಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
15/06/2022 09:33 pm