ಬೆಂಗಳೂರು : ಬೈಕ್ ಕಳ್ಳತನ ಮಾಡುವ ವೇಳೆ ಕಳ್ಳನೊಬ್ಬ ರೆಡ್ ಹ್ಯಾಂಡ್ ಆಗಿ ಸ್ಥಳೀಯರಿಗೆ ತಗಲಾಕಿಕೊಂಡಿದ್ದಾನೆ. ಕೆಂಗೇರಿ ಬಳಿ ಗಾಡಿ ಕಳ್ಳತನ ಮಾಡುತ್ತಿರುವಾಗ ಆರೋಪಿ ಮುಖ ರಾಮ್ ನನ್ನ ಸ್ಥಳೀಯರು ಹಿಡಿದ್ದಿದ್ದಾರೆ.
ಇನ್ನು ಸ್ಥಳೀಯರು ಹಿಡಿದ ಆರೋಪಿ ಮುಖ ರಾಮ್ KRS ಪಕ್ಷದಲ್ಲಿ ಕಾರ್ಯಕರ್ತನಾಗಿದ್ದ.
ಪಕ್ಷದ ಸಂಸ್ಥಾಪಕ ರವಿ ಕೃಷ್ಣ ರೆಡ್ಡಿ ರವರಿಗೆ ಭಾರಿ ಮುಖ ಭಂಗ ಆಗಿದೆ. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಕೆಂಗೇರಿ ಪೊಲೀಸರು ಮುಖ ರಾಮ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕಾರ್ಯಕರ್ತನ ಈ ರೀತಿಯ ವರ್ತನೆಯಿಂದ ಪಕ್ಷಕ್ಕೆ ಈಗ ಮುಜುಗರ ಉಂಟಾಗಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
28/07/2022 05:20 pm