ಬೆಂಗಳೂರು: ಬೊಮ್ಮಸಂದ್ರ ಪುರಸಭೆ ಅಧ್ಯಕ್ಷ ಸ್ಥಾನ ಮಾಡಲು ಬಿಜೆಪಿ ಸ್ಥಳೀಯ ನಾಯಕರು ತಮ್ಮ ಪಕ್ಷದಿಂದ 25 ಲಕ್ಷ ರೂ. ಹಣವನ್ನು ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ರೋಲ್ ಕಾಲ್ ಮಾಡಿದ್ದಾರೆ ಎಂದು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಇಂದು ನಡೆದ ಸಂಜೆ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿಯಲ್ಲಿರುವ ಕೆಲ ನಾಯಕರು ರೋಲ್‌ಕಾಲ್‌ಗಳಿದಿದ್ದಾರೆ. ಅದಲ್ಲದೆ ಮಂಜುಳಾ ಎಂಬುವರ ಬಳಿ 25 ಲಕ್ಷ ರೂ. ಹಣವನ್ನು ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ಅವರು ತೆಗೆದುಕೊಂಡಿರುವ ವಿಚಾರ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಬಿಜೆಪಿ ವರ್ಸಸ್ ಬಿಜೆಪಿ ಆನೇಕಲ್ ತಾಲೂಕಿನಲ್ಲಿ ಬಿಜೆಪಿ ಪಕ್ಷದ ಮುಖಂಡರು ಎಂಎಲ್ಎಗಳಾಗಿ ಬಿಟ್ಟಿದ್ದಾರೆ. ಯಾರ ಹತ್ತಿರ ಹಣ ಇದೆಯೋ ಅಂತವರನ್ನು ಮುಂದೆ ಬಿಟ್ಟು ಬಿಜೆಪಿಯನ್ನು ತೆರೆ ಮನೆಯಲ್ಲಿ ಸೋಲಿಸಲು ಕಾಂಗ್ರೆಸ್ ಜೊತೆಗೆ ಸೇರಿ ಡಬಲ್ ಗೇಮ್ ಆಡುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Kshetra Samachara
08/09/2022 09:47 am