ದೊಡ್ಡಬಳ್ಳಾಪುರ: ನಗರಸಭೆ ಕಚೇರಿ ಮುಂಭಾಗದ ರಸ್ತೆಯಲ್ಲಿ ಗಣೇಶ ಮೂರ್ತಿಗಳ ಮಾರಾಟ ಮಳಿಗೆಗಳನ್ನ ತೆರೆಯಲಾಗಿದೆ. ನಗರಸಭೆ ಹೆಸರಲ್ಲಿ ಗಣೇಶ ಮೂರ್ತಿ ಮಾರಾಟಗಾರರಿಂದ ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಸಾವಿರ ರೂಪಾಯಿ ಸುಂಕ ಕಟ್ಟಿದ್ದಕ್ಕೆ ರಸೀದಿ ಸಹ ಕೊಟ್ಟಿಲ್ಲ. ರಾಜಾರೋಷವಾಗಿ ವಸೂಲಿ ದಂಧೆ ನಡೆಯುತ್ತಿದ್ದರೂ ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ನಗರಸಭೆಯ ಮುಂಭಾಗದ ಕೋರ್ಟ್ ರಸ್ತೆಯಲ್ಲಿ 30ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಮಾರಾಟ ಮಳಿಗೆಗಳನ್ನ ತೆರೆಯಲಾಗಿದೆ. ನಿನ್ನೆಯಿಂದ ಗಣೇಶ ಮೂರ್ತಿಗಳ ಮಾರಾಟ ಮಾಡಲಾಗುತ್ತಿದೆ. ಇಂದು ಸಂಜೆ ಏಕಾಏಕಿ ಬಂದ 5 ಜನರ ಗುಂಪು ನಾವು ನಗರಸಭೆಯಿಂದ ಸುಂಕ ವಸೂಲಿಗೆ ಟೆಂಡರ್ ತಗೊಂಡಿದ್ದೇವೆ, ಎರಡು ಸಾವಿರ ಸುಂಕ ಕೋಡಿ ಎಂದು ಕೇಳಿದ್ದಾರೆ, ಇಷ್ಟೊಂದು ಹಣ ನಮ್ಮ ಕೈಯಲ್ಲಿ ಕೊಡಲು ಸಾಧ್ಯವಿಲ್ಲ ಎಂದಾಗ ಅಂಗಡಿ ಖಾಲಿ ಮಾಡ್ಕೊಂಡ್ ಹೋಗಿ ಎಂದು ದೌರ್ಜನ್ಯ ನಡೆಸಿದ್ದಾರೆ. ವಿಧಿ ಇಲ್ಲದೆ ಮಾರಾಟಗಾರರು ಒಂದು ಸಾವಿರ ನೀಡಿದ್ದಾರೆ. ಒಂದು ಸಾವಿರ ಸುಂಕ ಕೊಟ್ಪಿದ್ದಕ್ಕೆ ರಸೀದಿ ಸಹ ಕೊಟ್ಟಿಲ್ಲ. ನಿನ್ನೆ ಸುರಿದ ಮಳೆಯಿಂದಾಗಿ ಸಾವಿರಾರು ರೂಪಾಯಿ ನಷ್ಟವಾಗಿದೆ. ಈಗ ವಸೂಲಿ ದಂಧೆಯಿಂದ ಮತ್ತುಷ್ಟು ನಷ್ಟಕ್ಕೆ ತುತ್ತಾಗಿದ್ದೇವೆಂದು ತಮ್ಮ ಅಳಲು ತೋಡಿಕೊಂಡರು.
ಸಾಮಾನ್ಯವಾಗಿ ಬೀದಿ ಬದಿಯ ವ್ಯಾಪಾರಿಗಳಿಂದ ದಿನಕ್ಕೆ 20 ರೂಪಾಯಿ ಸುಂಕ ವಸೂಲಿ ಮಾಡಲಾಗುತ್ತೆ, ಒಂದು ಸಾವಿರ ಸುಂಕ ವಸೂಲಿಗೆ ಅವಕಾಶ ನೀಡಿದ ಅಧಿಕಾರಿಯಾದ್ರು ಯಾರು, ನಗರಸಭೆಯ ಮುಂಭಾಗದಲ್ಲಿ ವಸೂಲಿ ದಂಧೆ ನಡೆಯುತ್ತಿದ್ದರು ಅಧಿಕಾರಿಗಳು ಕಣ್ಮುಂಚಿ ಕುಳಿತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
PublicNext
31/08/2022 12:41 pm