ಬೆಂಗಳೂರು: ಜೈಲಿನಲ್ಲೇ ಇದ್ದು ಕಳ್ಳತನ ಮಾಡಿಸುತ್ತಿದ್ದ ಕುಖ್ಯಾತ ಮನೆಗಳ್ಳರನ್ನ ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಮಂಜುನಾಥ್ ಅಂಡ್ ಟೀಂ ಅರೆಸ್ಟ್ ಮಾಡಿದ್ದಾರೆ. ಜೈಲಿನಿಂದ ಹೊರಬರಲು ಲಾಯರ್‌ಗೆ ಫೀಜ್ ನೀಡಲು ಜೈಲಿನಿಂದಲೇ ಸ್ಕೆಚ್ ಹಾಕಿಸುತ್ತಿದ್ದ. ಶಿಷ್ಯಂದಿರು ಜೈಲಿಗೆ ಎಂಟ್ರಿಕೊಟ್ಟಾಗ ಮನೆಗಳ್ಳತನಕ್ಕೆ ಪ್ಲಾನ್ ಕೊಟ್ಟು ಕಳ್ಳತನ ಮಾಡಿಸಿದ್ದ ಶ್ರೀನಿವಾಸ್ ಜೊತೆಗೆ ಆತನ ಸಹಚರರನ್ನು ಮಾದನಾಯಕನಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ.
ಸದ್ಯ ಕಳ್ಳತನದಲ್ಲಿ ಭಾಗಿಯಾಗಿದ್ದ ದಂಪತಿ ಸೇರಿ 6 ಮಂದಿ ಸೆರೆಯಾಗಿದ್ದಾರೆ. ಶ್ರೀನಿವಾಸ್, ಮಂಜುಳಾ, ಮುಬಾರಕ್ ಅಹ್ಮದ್, ಗಂಗಾಧರಪ್ಪ ಶಾರದಮ್ಮ, ಗಂಗಣ್ಣ@ ಸೊಳ್ಳೆ ಅರೆಸ್ಟ್ ಆಗಿದ್ದಾರೆ. ಇವರಿಂದ 25 ಲಕ್ಷ ಮೌಲ್ಯದ 245 ಗ್ರಾಂ ತೂಕದ ಚಿನ್ನದ ಗಟ್ಟಿ 255 ಗ್ರಾಂ ತೂಕದ ಚಿನ್ನಾಭರಣ ಸೇರಿ ಒಟ್ಟು 500 ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿಗಳನ್ನ ಸೀಜ್ ಮಾಡಿದ್ದಾರೆ.
ಈ ಹಿಂದೆ ಕಳ್ಳತನ ಮಾಡಿ ಜೈಲು ಸೇರಿದ್ದ ಶ್ರೀನಿವಾಸ್ ಜಾಮೀನು ಪಡೆಯಲು ಲಾಯರ್‌ಗೆ ಹಣ ನೀಡಬೇಕು ಅಂತ, ಕಳ್ಳತನ ಮಾಡಿ ಸ್ನೇಹಿತನನ್ನ ಬಿಡಿಸಿಕೊಳ್ಳಲು ಮನೆಗೆ ಆರೋಪಿಗಳು ಕನ್ನ ಹಾಕಿದ್ರು. ಆರೋಪಿಗಳ ವಿರುದ್ಧ ಸುಬ್ರಹ್ಮಣ್ಯಪುರ , ಬಸವೇಶ್ವರ ನಗರ ರಾಜಗೋಪಾಲನಗರ , ಯಲಹಂಕ , ಕಾಮಾಕ್ಷಿಪಾಳ್ಯ ಸೇರಿ ಹಲವೆಡೆ 20 ಕಳವು ಪ್ರಕರಣಗಳು ದಾಖಲಾಗಿವೆ.
PublicNext
06/07/2022 06:27 pm