ಬೆಂಗಳೂರು: ಸ್ನೇಹಿತರ ಜೊತೆ ಪಾರ್ಟಿಗಳಿಗೆ ತೆರಳಿ ಡ್ರಗ್ಸ್ ಮಾರಾಟವನ್ನು ಕಸುಬು ಮಾಡಿಕೊಂಡಿದ್ದ ವೆಲ್ ಎಜುಕೇಟೆಡ್ ಗಳು ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಶ್ರೀಜಿತ್, ತೇಜ್ ಸ್ವರೂಪ್ @ಟೋನಿ, ಹರ್ಷಿತ್ ಮತ್ತು ಕುಂಜು ಮೂಸ ಬಂಧಿತ ಆರೋಪಿಗಳಾಗಿದ್ದಾರೆ. ಇದರಲ್ಲಿ ಶ್ರೀಜಿತ್ ಬಿಎ ಪದವೀಧರ, ತೇಜ್ ಸ್ವರೂಪ್ ಎಂಬಿಎ, ಹರ್ಷಿತ್ ಬಿಇ, ಕುಂಜು ಮೂಸ ಬಿಬಿಎ ಪದವೀಧರಾಗಿದ್ದಾರೆ.
ನಗರದ ಪ್ರತಿಷ್ಠಿತ ಕಾಲೇಜು ಹಾಗೂ ಯೂನಿವರ್ಸಿಟಿಗಳಲ್ಲಿ ವ್ಯಾಸಂಗ ಮಾಡ್ತಿರೊ ವಿದ್ಯಾರ್ಥಿಗಳು ಕೋರಮಂಗಲ, ಇಂದಿರಾನಗರದಲ್ಲಿ ವೀಕೆಂಡ್ ಪಾರ್ಟಿಗಳಲ್ಲಿ ಡ್ರಗ್ಸ್ ಮಾರಾಟ ಮಾಡ್ತಿದ್ರು. ಅಲ್ಲದೆ ತಮ್ಮದೆ ಕಾಲೇಜು ವಿದ್ಯಾರ್ಥಿಗಳಿಗೆ ಸಹ ಡ್ರಗ್ಸ್ ಮಾರಾಟ ಮಾಡಿರೊ ಆರೋಪಿಗಳನ್ನ ಮಾದನಾಯಕನಹಳ್ಳಿ ಪೋಲಿಸ್ ಬಂಧಿಸಿದ್ದಾರೆ.
ಬಂಧಿತರಿಂದ 62, ಗ್ರಾಂ ಎಂಡಿಎಂಎ, ಒಂದು ಕೆಜಿ ಗಾಂಜಾ ಸೀಜ್ ಆಗಿದ್ದು, ಆಫ್ರಿಕನ್ ವ್ಯಕ್ತಿಯಿಂದ ಸಪ್ಲೈ ಪಡೆದು ಮಾರಾಟ ಮಾಡ್ತಿದ್ರು. ಸದ್ಯ ತಲೆ ಮರೆಸಿಕೊಂಡಿರೋ ವಿದೇಶಿ ಪ್ರಜೆ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.
PublicNext
06/07/2022 05:00 pm