ಬೆಂಗಳೂರು: ಕರ್ಕಶ ಶಬ್ದ ಮಾಡುತ್ತಾ ಬರ್ತಿದ್ದ ಲಾಂಗ್ ಡ್ರೈವ್ ಬೈಕ್ ರೈಡರ್ಸ್ ಗೆ, ವೀಲಿಂಗ್ ಪುಂಡರಿಗೆ ದೇವನಹಳ್ಳಿ ಆರ್‌ಟಿಒ ಅಧಿಕಾರಿಗಳು ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ. ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿ 2 ಗಂಟೆಯಲ್ಲೇ 129ಕ್ಕೂ ಹೆಚ್ಚು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ವೀಕೆಂಡ್ ಕಾರಣ ಯುವಜನರು ಬೆಳ್ಳಂಬೆಳಗ್ಗೆ ಸನ್ ರೈಸ್ ನೋಡಲು, ಲಾಂಗ್ ಡ್ರೈವ್ ಹೆಸರಲ್ಲಿ ನಂದಿಬೆಟ್ಟಕ್ಕೆ ಹೋಗಿ ಎಂಜಾಯ್ ಮಾಡೋದು ಮಾಮೂಲಿ. ಈ ವೇಳೆ ಮೈಮರೆತು ಅಪಘಾತ, ಸಾವು- ನೋವು ಜಾಸ್ತಿಯಾಗ್ತಿತ್ತು. ಲಾಂಗ್ ಡ್ರೈವ್ ಬಂದ ಬೈಕ್ ಸವಾರರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ರಾಣಿಕ್ರಾಸ್ ಬಳಿ ತಡೆ ಹಿಡಿದ ಸಾರಿಗೆ ಇಲಾಖೆ ಜಂಟಿ ಆಯುಕ್ತ ಹಾಲಸ್ವಾಮಿ ನೇತೃತ್ವದ ತಂಡ ವಾಹನ ಪರಿಶೀಲನೆ ನಡೆಸಿದ್ರು. 5 ತಂಡ ರಚಿಸಿ, ನಂದಿಬೆಟ್ಟ ರಸ್ತೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಆರ್‌ಟಿಒ ಅಧಿಕಾರಿಗಳು ಬೈಕ್ ವೀಲಿಂಗ್, ಕರ್ಕಶ ಹಾರ್ನ್ ಮಾಡುತ್ತಾ ಕಿರಿಕಿರಿ ಉಂಟು ಮಾಡ್ತಿದ್ದ ಬೈಕ್ ಗಳನ್ನು ಸೀಝ್ ಮಾಡಿದ್ದಾರೆ.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಇಂತಹ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಜತೆಗೆ ಖಾಸಗಿ ಶಾಲಾ ಬಸ್ ಗಳು ಕೂಡ ಟ್ಯಾಕ್ಸ್ ಕಟ್ಟದೆ ಕಾರ್ಯ ನಿರ್ವಹಿಸುತ್ತಿದ್ದರಿಂದ ಅವುಗಳನ್ನೂ ಅಧಿಕಾರಿಗಳು ಸೀಝ್ ಮಾಡಿದ್ದಾರೆ.
- ಸುರೇಶ್ ಬಾಬು Public Next ದೇವನಹಳ್ಳಿ
Kshetra Samachara
03/07/2022 04:01 pm