ಬೆಂಗಳೂರು: ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಅವರನ್ನು ಬಂಧಿಸಿದ್ದಾರೆ.
ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ರೂ. ವಂಚಿಸಿದ್ದ ಆರೋಪ ಲೀಲಾವತಿ ವಿರುದ್ಧ ಕೇಳಿ ಬಂದಿದೆ. ಅಭಿವೃದ್ಧಿ ಯೋಜನೆ ಹೆಸರಿನಲ್ಲಿ ವಂಚಿಸಿದ್ದ ಆರೋಪ ನಿಗಮದ ವಿರುದ್ಧ ಸಹ ಹರಿದಾಡಿತ್ತು. ಈ ಹಿನ್ನೆಲೆ ನಿಗಮದ ಎಂ.ಡಿ ಲೀಲಾವತಿ, ಜನರಲ್ ಮ್ಯಾನೇಜರ್ ನಾಗರಾಜಪ್ಪ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ನಡೆಸಿದ್ದರು. ತನಿಖೆಗೆ ಅಗತ್ಯವಿರುವ ದಾಖಲೆಗಳನ್ನ ಸಲ್ಲಿಸಲು ಇಬ್ಬರಿಗೂ ಸೂಚಿಸಿದ್ದರು. ಆದರೆ ತನಿಖೆಗೆ ಸಹಕರಿಸದ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಇರುವ ಹಿನ್ನೆಲೆ ಲೀಲಾವತಿ ಅವರನ್ನ ಬಂಧಿಸಲಾಗಿದೆ. ಸದ್ಯ ಲೀಲಾವತಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
Kshetra Samachara
15/06/2022 08:38 pm