ಬೆಂಗಳೂರು: ಎಸಿಬಿ ಅಧಿಕಾರಿಗಳು ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನ ಹೊಡೆದು ಬೀಳಿಸಿದ್ದಾರೆ. ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತರ ಮೇಲಿನ ದಾಳಿ ವೇಳೆ ಆಕಸ್ಮಿಕವಾಗಿ ಬೆಸ್ಕಾಂ ಇಇ ಸಿಕ್ಕಿ ಬಿದ್ದಿದ್ದಾರೆ. ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ಮನೆ ಮೇಲೆ ಮಾರ್ಚ್ 16ರಂದು ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ಎಸಿಬಿ ಅಧಿಕಾರಿಗಳು ಜ್ಞಾನೇಂದ್ರ ಕುಮಾರ್ ಬೇನಾಮಿ ಆಸ್ತಿ ಅನುಮಾನ ಹಿನ್ನಲೆ ಆಪ್ತ ಮುನ್ನಾವರ್ ಪಾಷ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು..
ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಪ್ಲಾಟ್ ಮೇಲೆ ದಾಳಿ ನಡೆಸಿ ಜ್ಙಾನೇಂದ್ರ ಕುಮಾರ್ ಬೇನಾಮಿ ಪರಿಶೀಲನೆಗೆ ಮುಂದಾಗಿದ್ದರು. ಈ ವೇಳೆ ಎಸಿಬಿಗೆ ಸರ್ಪ್ರೈಸ್ ಮಾಹಿತಿ ಸಿಕ್ಕಿದೆ. ಮುನಾವರ್ ಪಾಷ ಮನೆಯಲ್ಲಿ ನೆಲಮಂಗಲ ಬೆಸ್ಕಾಂ ಇಇ ಕುಮಾರ್ ನಾಯಕ್‌ಗೆ ಸೇರಿದ ದಾಖಲೆಗಳು ಪತ್ತೆಯಾಗಿತ್ತು. ದಾಳಿ ವೇಳೆ ಚಿನ್ನಾಭರಣ ಹಾಗೂ ಕೆಲ ದಾಖಲೆಗಳು ಮುನಾವರ್ ಪಾಷ ಮನೆಯಲ್ಲಿ ಪತ್ತೆಯಾಗಿತ್ತು. ಇದರ ಬಗ್ಗೆ ವಿಚಾರಿಸಿದಾಗ ಕುಮಾರ್ ನಾಯಕ್ ಹೆಸರು ಬಾಯಿ ಬಿಟ್ಟದ್ದ ಮುನಾವರ್ ಪಾಷ. ಸದ್ಯ ಈ ಕುರಿತು ಎಸಿಬಿ ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸುತ್ತಿದೆ.
ಸದ್ಯ ಎಸಿಬಿ ದಾಳಿ ಮುನಾವರ್ ಮನೆಯಲ್ಲಿ ಜಾಲ ಹೋಬಳಿಯಲ್ಲಿ 20 ಗುಂಟೆ ಜಮೀನು ಪತ್ರ, 413 ಗ್ರಾಂ ಚಿನ್ನಾಭರಣ, 5.5ಗ್ರಾಂ ವಜ್ರಾಭರಣ, 4 ಕೆಜಿ ಬೆಳ್ಳಿ, 16 ಲಕ್ಷ ರೂ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.
Kshetra Samachara
31/03/2022 05:01 pm