ಬೆಂಗಳೂರು: ಬಿಬಿಎಂಪಿಗೆ ಅದ್ಯಾವಾಗ ಬುದ್ಧಿ ಬರುತ್ತೋ ದೇವರಿಗೆ ಗೊತ್ತು. ಅಧಿಕಾರಿಗಳನ್ನ ಹೇಳೋರಿಲ್ಲ ಕೇಳೋರಿಲ್ಲಾ ಎಂಬತ್ತಾಗಿದೆ. ಗಿಡ ನೆಡಿ ಪರಿಸರ ಸಂರಕ್ಷಿಸಿ ಎಂದು ಎಲ್ಲೆಡೆ ಅಭಿಯಾನ ನಡೆಯುತ್ತಲಿದ್ದರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ಸೊಂಪಾಗಿ ಬೆಳೆದು ನಿಂತ ಮರಗಳ ಮಾರಣ ಹೋಮ ಮಾಡುತ್ತಿದೆ.
ಬಿಬಿಎಂಪಿಗೆ ಮರಗಳಿಕ್ಕಿಂತ ಜಾಹೀರಾತು ಮುಖ್ಯವಾಗಿದೆ.ದುಡ್ಡು ಮಾಡಲು ಹೋಗಿ ಸಾಲು ಸಾಲು ಮರಗಳಿಗೆ ಕೊಡಲಿ ಏಟು ಹಾಕುತ್ತಿರುವ ನಿರ್ಧಾರ ನಿಜಕ್ಕೂ ಖಂಡನೀಯವಾದದ್ದು.
ಔಟರ್ ರಿಂಗ್ ರೋಡ್ ನಲ್ಲಿ ಹೊರಮಾವು ಸಿಗ್ನಲ್ ಬಳಿ ಜಾಹೀರಾತುದಾರರಿಗೆ ಮಣೆ ಹಾಕಲು ಹೋಗಿ ಮರಗಳ ಮಾರಣಹೋಮ ಮಾಡಿದ್ದಾರೆ ಅಧಿಕಾರಿಗಳು. ಜಾಹೀರಾತು ನಾಮ ಫಲಕಗಳಿಗಾಗಿ ಹತ್ತಾರು ಮರಗಳಿಗೆ ಕೊಡಲಿ ಏಟು ಹಾಕಲಾಗಿದೆ.ಬಿಬಿಎಂಪಿ ಅರಣ್ಯ ಇಲಾಖೆಯಿಂದ ರಾತ್ರೋ ರಾತ್ರಿ ಮರಗಳನ್ನು ನೆಲಸಮ ಮಾಡಲಾಗಿದ್ದು.ಸಾರ್ವಜನಿಕರು ಅಧಿಕಾರಿಗಳ ನಡೆಗೆ ಡಾಮಂಡಲವಾಗಿದ್ದಾರೆ..
Kshetra Samachara
01/12/2021 02:11 pm