ಗೂಗಲ್ ವೆಬ್ ಸೈಟ್ ನಲ್ಲಿ ಜಾಹೀರಾತು ನೀಡುತ್ತಿದ್ದ ವಂಚಕರು, ತಮ್ಮ ಕಾಂಟ್ಯಾಕ್ಟ್ ನಂಬರ್ಸ್ ನ್ನು ಡಿಸ್ ಪ್ಲೇ ಮಾಡ್ತಿದ್ದರು. ವಾಹನ ಟ್ರಾನ್ಸ್ ಫರ್ ಮಾಡೊ ನೆಪದಲ್ಲಿ ವಂಚಿಸುತ್ತಿದ್ರು. ಈ ಖದೀಮರಿಗೆ ಈಗ ಯಲಹಂಕ ಪೊಲೀಸರು ಕೋಳ ತೊಡಿಸಿದ್ದಾರೆ. ಪರನ್ ಸಿಂಗ್ ಚೌಹಾಣ್ (25), ನರೇಂದ್ರ(32), ಧರ್ಮೇಂದ್ರ (21), ಧರ್ಮವೀರ್(24) ಬಂಧಿತರು.
ಆನ್ ಲೈನ್ ನಲ್ಲಿ ಆರ್ಡರ್ ಕಥೆ ಕೇಳಿದ್ರೆ ಶಾಕ್ ಆಗ್ತದೆ. ಆರ್ಡರ್ ಮಾಡಿ ತಿಂಗಳು ಕಳೆದರೂ ವಾಹನ ಡೆಲಿವರಿ ಕೊಡದೇ ಕಳ್ಳಾಟ ಆಡ್ತಿದ್ದರು. ಇದೇ ರೀತಿ ವಂಚನೆಗೆ ಒಳಗಾಗಿದ್ದ ವ್ಯಕ್ತಿ ಯಲಹಂಕದ ಸಿಇಎನ್ ಠಾಣೆಗೆ ದೂರು ನೀಡಿದ್ದ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬುಲೆಟ್ ಶಿಫ್ಟ್ ಮಾಡುವ ಸಲುವಾಗಿ, ಮೊದಲು 4 ಸಾವಿರ ಶಿಫ್ಟಿಂಗ್ ಚಾರ್ಜ್ ಅಂತ ಅಡ್ವಾನ್ಸ್ ಪಡೆದಿದ್ದರು. 20 ದಿನ ಆದರೂ ವಾಹನ ಹುಬ್ಬಳ್ಳಿ ತಲುಪಿರಲಿಲ್ಲ. ಡಿಮ್ಯಾಂಡ್ ಹಣ ಕೊಟ್ಟರೆ, ಹಣ ಪಡೆದು ನಿಜವಾದ ಕಾರ್ಗೋ ಕಂಪನಿಯ ಸ್ಥಳದಲ್ಲಿ ವಾಹನ ಬಿಟ್ಟು ಹೋಗ್ತಿದ್ದರು. ಬೈಕ್ ಮಾಲೀಕ ಘಟನೆ ಬಗ್ಗೆ ಹುಡುಕಿದಾಗ ಸತ್ಯಾಂಶ ಬಯಲಾಗಿದೆ.
ಮೋಸಕ್ಕೆ ಬಿದ್ದು ಡೆಲಿವರಿ ಕಂಪನಿಗೆ ಮತ್ತೆ ಹಣ ಕೊಟ್ಟು ಬೈಕ್ ಪಡೆಯುವ ಸ್ಥಿತಿ ನಿರ್ಮಾಣ ಆಗುತ್ತಿತ್ತು. ಇಂತಹ ಆನ್ ಲೈನ್ ವಂಚಕರ ಬಗ್ಗೆ ಜನರು ಜಾಗರೂಕರಾಗಿರಬೇಕು.
- ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಯಲಹಂಕ
PublicNext
20/07/2022 06:11 pm