ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಲಾಸಿಪಾಳ್ಯ ಠಾಣೆ‌ ಇನ್‌ಸ್ಪೆಕ್ಟರ್ ಸಸ್ಪೆಂಡ್ ವಿಚಾರಕ್ಕೆ ದೂರುದಾರ ಮೂಹಿಜ್ ಬೇಸರ

ಕರ್ತವ್ಯಲೋಪ ಎಸಗಿದ ಆರೋಪದಡಿ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಚೇತನ್‌ ಕುಮಾರ್ ಸಸ್ಪೆಂಡ್ ಮಾಡಿದ್ದ ಬೆನ್ನಲೇ ಪ್ರಕರಣ‌ದ‌ ದೂರುದಾರ ಬೇಸರ ವ್ಯಕ್ತಪಡಿಸಿದ್ದಾರೆ.

ಎಫ್ಐಆರ್ ದಾಖಲಿಸಿಕೊಳ್ಳುವಂತೆ ನಾನು ಕಲಾಸಿಪಾಳ್ಯ ಪೊಲೀಸರು ಬೇಡಿಕೆ‌ ಇಟ್ಟಿರಲಿಲ್ಲ.‌ ಧಮ್ಕಿ ಹಾಕಿದಾಗ ಇವರು ರೌಡಿಗಳು ಅಂತ ಕೂಡ ನನಗೆ ಗೊತ್ತಿರಲಿಲ್ಲ. ದೂರ ಕೊಟ್ಟು ಎಫ್‌ಐಆರ್ ಬೇಡ ಅವರನ್ನು ನನ್ನ ತಂಟೆಗೆ ಬರದಂತೆ ಅಷ್ಟೇ ಹೇಳಿದ್ದೆ. ಆದರೆ ಇದಾದ ನಂತರ ಕೂಡ ಕರೆ ಬಂದಾಗ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಭೇಟಿಯಾಗಿ ರೌಡಿಶೀಟರ್ ಬಾಂಬೆ ಸಲೀಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾತ್ರ ಕೇಳಿಕೊಂಡಿದ್ದೆ. ಎಫ್ಐಆರ್ ದಾಖಲಿಸುವಂತೆ ಇನ್‌ಸ್ಪೆಕ್ಟರ್ ಸೂಚಿಸಿದರೂ ಪ್ರಕರಣಕ್ಕೆ ದಾಖಲಿಸದಂತೆ ಮನವಿ‌ ಮಾಡಿದ್ದೆ ಎಂದು‌ ದೂರುದಾರ ಮೂಹಿಜ್ ಅಹಮದ್ ಹೇಳಿದ್ದಾರೆ.

ಧಾರವಾಡ ಜೈಲಿನಲ್ಲಿ‌ದ್ದುಕೊಂಡೆ ರಿಯಲ್‌ ಎಸ್ಟೇಟ್ ಉದ್ಯಮಿ ಮುಜೀಬ್‌ಗೆ ಸಹಚರರ ಮುಖಾಂತರ ವಿಡಿಯೋ ಕರೆ ಮಾಡಿ 8 ಲಕ್ಷ ಹಣ ನೀಡಬೇಕು. ಇಲ್ಲದಿದ್ದರೆ ಸಾಯಿಸುತ್ತೇವೆ ಎಂದು ಧಮಕಿ ಹಾಕಿದ್ದರು. ಈ‌ ಸಂಬಂಧ‌ ಸೂಕ್ತ ಕ್ರಮ ಕೈಗೊಳ್ಳುವಂತೆ ಬಂಧಿಖಾನೆ ಇಲಾಖೆಗೆ ದೂರು ನೀಡಿದ್ದೆ. ದೂರನ್ನು ಪೊಲೀಸ್ ಕಮಿಷನರ್‌ಗೆ ವರ್ಗಾಯಿಸಿದ್ದರು. ಈ ಬಗ್ಗೆ ತನಿಖೆ‌ ನಡೆಸುವಂತೆ ಸಿಸಿಬಿಗೆ ಆದೇಶಿಸಿದ್ದರು. ಇದೀಗ ಪೊಲೀಸ್ ಇನ್‌ಸ್ಪೆಕ್ಟರ್ ಸಸ್ಪೆಂಡ್ ಆಗಿರುವುದು ಸರಿಯಲ್ಲ. ಬಾಂಬೆ ಸಲೀಂ ಕಾಟದಿಂದ‌ ಮುಕ್ತಿಗೊಳಿಸಿ, ಎಫ್ಐಆರ್ ದಾಖಲಿಸಿಕೊಳ್ಳದಂತೆ ಮನವಿ ಮಾಡಿದ್ದೆ. ಆದರೂ‌ ಇನ್‌ಸ್ಪೆಕ್ಟರ್ ಚೇತನ್ ಎಫ್ಐಆರ್ ಮಾಡಿಸಿದ್ದರು. ಇದೀಗ ನಿರ್ಲಕ್ಷ್ಯ ತೋರಿದ ಆರೋಪದಡಿ ಇನ್‌ಸ್ಪೆಕ್ಟರ್‌ನನ್ನು ಅಮಾನತು ಮಾಡಿರುವುದು ಸರಿಯಲ್ಲ‌. ಕೂಡಲೇ ಸಸ್ಪೆಂಡ್ ಆದೇಶವನ್ನ ಹಿಂಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Edited By :
PublicNext

PublicNext

08/07/2022 04:51 pm

Cinque Terre

44.74 K

Cinque Terre

0

ಸಂಬಂಧಿತ ಸುದ್ದಿ