ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಎಮ್ರಹಳ್ಳಿ ಗ್ರಾಮದಲ್ಲಿ ಕೇಬಲ್ ತಾಮ್ರ ಕದಿಯುತ್ತಿದ್ದ ಕಳ್ಳನನ್ನು ಮಾಲಿನ ಸಮೇತ ಗ್ರಾಮಸ್ಥರೆ ಹಿಡಿದಿದ್ದರು. ಕಳ್ಳನನ್ನ ಹಿಡಿದಿದ್ದೇವೆ ಬನ್ನಿ ಎಂದು ಕರೆ ಮಾಡಿದರೆ ದೇವನಹಳ್ಳಿಯ ವಿಜಯಪುರ ಪೊಲೀಸರು ನಿರ್ಲಕ್ಷ್ಯ ಮಾಡಿ, ನೀವೇ ಕರೆತನ್ನಿ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ.
ಎಮ್ರಹಳ್ಳಿಯಲ್ಲಿ ಕಳೆದ ರಾತ್ರಿ ಬೋರ್ ವೆಲ್ ಗಳಲ್ಲಿ ಕೇಬಲ್ಗಳನ್ನು 45ವರ್ಷ ವಯಸ್ಸಿನ ಕಳ್ಳನೊಬ್ಬ ಕದಿಯುತ್ತಿದ್ದ. ಕದ್ದು ಕೇಬಲ್ ನ ನೀಲಿಗಿರಿ ತೋಪಿನಲ್ಲಿ ಬೆಂಕಿಗೆ ಹಾಕಿ ತಾಮ್ರ ಬೇರ್ಪಡಿಸಿ ಮಾರಾಟ ಮಾಡುತ್ತಿದ್ದ. ಹಲವಾರು ದಿನದಿಂದ ಲಕ್ಷಾಂತರ ಮೌಲ್ಯದ ಕೇಬಲ್ ಕಳೆದುಕೊಂಡಿದ್ದ ರೈತರು ಹೊಂಚುಹಾಕಿ ಹಿಡಿದು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ವಿಜಯಪುರ ಪೊಲೀಸರು ನಿರ್ಲಕ್ಷ್ಯ ತೋರಿರುವ ಮಾತು ರೆಕಾರ್ಡ್ ಆಗಿದೆ..
ಮದ್ಯರಾತ್ರಿ 1 ಗಂಟೆಗೆ 112 ವಾಹನದಲ್ಲೂ ಪೊಲೀಸರು ಬಂದಿದ್ದಾರೆ.112 ವಾಹನ ವಿಶ್ವನಾಥಪುರ ಪೊಲೀಸ್ ಠಾಣೆಗೆ ಸೇರಿದ್ದರಿಂದ ನೀವು ವಿಜಯಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಎಂದು ಅಸಡ್ಡೆ ತೋರಿದ್ದಾರೆ. ವಿಜಯಪುರ ಪೊಲೀಸರ ಈ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ..
ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ದೇವನಹಳ್ಳಿ
PublicNext
24/06/2022 01:39 pm