ಜುಲೈ 16 ರಂದು ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿ ಹೊಸಹಳ್ಳಿಯ ರಾಮಚಂದ್ರಪ್ಪನ ಮೇಲೆ ಹಲ್ಲೆ ಮಾಡಿ 20ಲಕ್ಷ ಬೆಲೆಯ ಹಂದಿ ಕದ್ದಿದ್ದರು. ಅಪ್ಪ-ಮಗನ ಮೇಲೆ ಗೂಡ್ಸ್ ವೆಹಿಕಲ್ ಗುದ್ದಿಸಿ ಖದೀಮರು ಎಸ್ಕೇಪ್ ಆಗಿದ್ದರು. ತೀವ್ರ ಹಲ್ಲೆಗೊಳಗಾದ ರಾಮಚಂದ್ರಪ್ಪ ಆಸ್ಪತ್ರೆಲಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಮನೆ ಸೇರಿದ್ದಾರೆ. ಇದೀಗ ಚಿಕ್ಕಜಾಲ ಪೊಲೀಸರು ಡಕಾಯಿತಿ ಪ್ರಕರಣದ 10 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶಂಕರ್ ಮತ್ತು ಅಶೋಕ್ ಡಕಾಯಿತಿ ಮಾಡಿ ಹಂದಿಲೋಡ್ ಸಮೇತ ಎಸ್ಕೇಪ್ ಆಗಿದ್ದ ಪ್ರಮುಖರು. ಚಿಕ್ಕಜಾಲ ಇನ್ಸ್ಪೆಕ್ಟರ್ ಪ್ರವೀಣ್ ಮತ್ತವರ ತಂಡ ಡಿಸಿಪಿ ಅನೂಪ್ ಶೆಟ್ಟಿ ಮಾರ್ಗದರ್ಶನದಲ್ಲಿ ದರೋಡೆಕೋರರನ್ನು ಪ್ರಾಣ ಪಣಕ್ಕಿಟ್ಟು ಗಂಗಾವತಿಯ ಕಾರಟಗಿ ಬಳಿ ಆರೋಪಿಗಳ ಕಾಲಿಗೆ ಗುಂಡೊಡೆದು ಬಂಧಿಸಿದ್ದರು. ಉಳಿದ ಅಂಬಣ್ಣ, ಅಡಿವೇಪ್ಪ, ಪರಶುರಾಮ, ಬಸವರಾಜು, ಮಂಜುನಾಥ್, ಕಿರಣ್, ಪಕೀರಪ್ಪ, ಶಂಕರ್ ನನ್ನು ಬಂಧಿಸಿದ್ದಾರೆ. ಇವರ ಬಂಧನದಿಂದ ದೊಡ್ಡಬಳ್ಳಾಪುರ, ಸೋಲದೇವನಹಳ್ಳಿ & ಮಾಗಡಿ ಠಾಣೆಗಳ 4 ಹಂದಿಕಳ್ಳತನ ಪ್ರಕರಣ ಪತ್ತೆಯಾಗಿವೆ. ಪೊಲೀಸರ ಕಾರ್ಯಾಚರಣೆಗೆ ಹಂದಿ ಸಾಕಾಣಿಕೆದಾರರು ಕೃತಜ್ಞತೆ ಸಲ್ಲಿಸಿದ್ದಾರೆ.
ರಾಜಾನುಕುಂಟೆಯ ಮಂಜುನಾಥ್ & ಹೊಸಹಳ್ಳಿಯ ಸ್ಥಳೀಯ ಅಂಬರೀಷ್ ಎಂಬಾತನ ಸಹಕಾರದಿಂದ ಈ ಹಂದಿಕಳ್ಳತನ ಪ್ರಕರಣ ನಡೆದಿತ್ತು. ಚಿಕ್ಕಜಾಲ ಪೊಲೀಸರು ಹಂದಿಕಳ್ಳರ ಕಾಲಿಗೆ ಗುಂಡೊಡೆದು ಬುದ್ಧಿ ಕಲಿಸಿದ್ದಾರೆ. ಈ ಪಾಠ ಎಲ್ಲಾ ಹಂದಿಕಳ್ಳರಿಗೆ ಎಚ್ಚರಿಕೆಯಾಗಲಿ..
PublicNext
20/08/2022 01:47 pm