ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ ಕಸದ ಲಾರಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಬಲಿ: 2ತಿಂಗಳಲ್ಲಿ ಇದು 4ನೇ ಬಲಿ

ಬೆಂಗಳೂರು: ಬೆಂಗಳೂರು ನಗರದಲ್ಲಿ ಮತ್ತೆ ಬಿಬಿಎಂಪಿ ಕಸದ ಲಾರಿ ಚಾಲಕರ ಬೇಜವಾಬ್ದಾರಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಬಲಿಯಾದ ದುರ್ಘಟನೆ ಇಂದು ಸಂಜೆ 4.30ರ ಸುಮಾರಿಗೆ ನಾಗವಾರ- ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ. ಯಾದಗಿರಿ ಜಿಲ್ಲೆ ಸುರಪುರ ಮೂಲದ ದೇವಣ್ಣ(25) ಬಿಲಿಯಾದ ಯುವಕ. ದೇವಣ್ಣ ಬೆಂಗಳೂರಿನ ಕೊತ್ತನೂರಿನಲ್ಲಿ ವಾಸವಾಗಿ ಸ್ವಿಗ್ಗಿ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ

ತನ್ನ ದ್ವಿಚಕ್ರ ವಾಹನದಲ್ಲಿ ನಾಗವಾರದಿಂದ ಹೆಗ್ಗಡೆ ನಗರ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬಿಬಿಎಂಪಿ ಕಸದ ಲಾರಿ ಹಾಗೂ ಆರೋಪಿ ಲಾರಿಚಾಲಕ ದಿನೇಶ್(40)ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ದಿನೇಶ್ ನಾಯಕ್ ದಾವಣಗೆರೆಯ ಹೆದ್ದನೆ ಗ್ರಾಮದವನು ಎನ್ನಲಾಗಿದೆ. ಸದ್ಯ ಬೆಂಗಳೂರಿನಲ್ಲಿದ್ದು ಲಾರಿ ಚಾಲಕನ ಕೆಲಸ ಮಾಡ್ತಿದ್ದವನು ದುರಂತಕ್ಕೆ ಕಾರಣವಾಗಿ ಪೊಲೀಸರ ಅತಿಥಿಯಾಗಿದ್ದಾನೆ.

ಕಳೆದ ಮಾರ್ಚ್ ತಿಂಗಳಲ್ಲಿ ಹೆಬ್ಬಾಳದಲ್ಲಿ ಶಾಲಾ ಬಾಲಕಿಯನ್ನು ಬಲಿ ಪಡೆದಿದ್ದ ಬಿಬಿಎಂಪಿ ಕಸದ ಲಾರಿ, ಮಾರ್ಚ್ ತಿಂಗಳಿನಲ್ಲಿ ಬಾಗಲೂರು ಕ್ರಾಸ್ ಬಳಿ ಮಗನಿಗೆ ಹುಡುಗಿ ನೋಡಿ ವಾಪಸ್ ಆಗ್ತಿದ್ದ ಸಾತನೂರು ಗ್ರಾಮದ ಹಿರಿಯ ವ್ಯಕ್ತಿಯನ್ನು ಬಲಿ ಪಡೆದಿತ್ತು.

ಏಪ್ರಿಲ್ ತಿಂಗಳಲ್ಲಿ ಮತ್ತೊಬ್ಬರನ್ನು ಬಲಿ ತೆಗೆದುಕೊಂಡಿದ್ದ ಬೇಜವಾಬ್ದಾರಿ ಬಿಬಿಎಂಪಿ ಕಸದ ಲಾರಿ ಚಾಲಕ ಇಂದು ನಾಗವಾರ ಥಣಿಸಂದ್ರ ಬಳಿ ಇಂದು ದೇವಣ್ಣನನ್ನು ಬಲಿ ಪಡೆದಿದೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಅಮಾಯಕ ಮಕ್ಕಳು, ಯುವಕರು, ವೃದ್ದರು ಬಲಿಯಾಗಬೇಕು..!? ಉತ್ತರಿಸುವವರು ಯಾರು..!?

Edited By : Nagaraj Tulugeri
PublicNext

PublicNext

14/05/2022 09:47 pm

Cinque Terre

28.66 K

Cinque Terre

2

ಸಂಬಂಧಿತ ಸುದ್ದಿ