ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಕ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ಬೈಬಲ್ ಶಿಕ್ಷಣ ಕಡ್ಡಾಯ ಆರೋಪ

ವರದಿ: ಗಣೇಶ್ ಹೆಗಡೆ

ಬೆಂಗಳೂರು: ಇಲ್ಲಿನ ಕ್ಲಾರೆನ್ಸ್ ಹೈಸ್ಕೂಲಿನಲ್ಲಿ ಬೈಬಲ್ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹಿಂದೂಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.

ರಿಚರ್ಡ್ಸ್ ಟೌನ್‌ನಲ್ಲಿರುವ ಈ ಶಾಲೆಗೆ ಪ್ರವೇಶಾತಿ ಪಡೆಯುವ ಪ್ರತಿ ವಿದ್ಯಾರ್ಥಿಗಳಿಗೂ ಬೈಬಲ್ ಓದುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಹೇಳಲಾಗಿದೆ. ಇದು ಸಂವಿಧಾನದ ಪರಿಚ್ಛೇದ 25ರ ಉಲ್ಲಂಘನೆ ಎಂದು ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ ದೂರಿದ್ದಾರೆ.

ಶಿಕ್ಷಣವನ್ನು ಇತರ ಮಕ್ಕಳಿಗೆ ಕಡ್ಡಾಯ ಮಾಡಿರುವುದು ಈ ಶಾಲೆಯ ಪ್ರಕಟಣೆಯಲ್ಲಿ ಇದೆ ಎಂದು ಹೇಳಲಾಗಿದೆ. ಕ್ರೈಸ್ತೇತರ ವಿದ್ಯಾರ್ಥಿಗಳ ಮೇಲೆ ಒಂದು ಧರ್ಮದ ಧಾರ್ಮಿಕ ಗ್ರಂಥವನ್ನು ಬಲವಂತವಾಗಿ ಹೇರುವುದು ಧಾರ್ಮಿಕ ನಂಬಿಕೆಗೆ ವಿರುದ್ಧ. ಇದು ಸರ್ವೋಚ್ಛ ನ್ಯಾಯಾಲಯದ ಆದೇಶದ ಉಲ್ಲಂಘನೆಯೂ ಎಂದು ಹೇಳಲಾಗಿದೆ. ಈ ಸಂಬಂಧ ಶಿಕ್ಷಣ ಸಚಿವರಿಗೆ ದೂರು ನೀಡಲಾಗುವುದು. ಮುಂದಿನ ದಿನಗಳಲ್ಲಿ ನ್ಯಾಯಲಯದ ಮೊರೆ ಹೋಗಲಿದ್ದೇವೆ ಎಂದು ಅವರು ತಿಳಿಸಿದರು. ಶಾಲೆಯ ಆಡಳಿತ ಮಂಡಳಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

Edited By : Manjunath H D
PublicNext

PublicNext

25/04/2022 10:41 am

Cinque Terre

39.28 K

Cinque Terre

1

ಸಂಬಂಧಿತ ಸುದ್ದಿ