ಬೆಂಗಳೂರು: ಸಿಲಿಕಾನ್ ಸಿಟಿ ಬೆಚ್ಚಿ ಬಿದ್ದಿದೆ. ಮೊದಲು ಎರಡು ಶಾಲೆ ಮತ್ತು ಆ ಮೇಲೆ ನಾಲ್ಕು ಶಾಲೆ. ಈಗ ಬರೋಬ್ಬರಿ 6 ಶಾಲೆಗಳಿಗೆ ಬಾಂಬ್ ಹಾಕುವ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿಯೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
ಹೌದು. ಇಡೀ ಬೆಂಗಳೂರಿನಲ್ಲಿ ಇಂದು ಇದೇ ಸುದ್ದಿನೇ ಸಂಚಲನ ಮೂಡಿಸಿದೆ. ಹೆಬ್ಬಗೋಡಿ, ಎಬಿನೈಜರ್, ಹೆಣ್ಣೂರು, ಸೆಂಟ್ ವಿನ್ಸೆಂಟ್ ಪಲ್ಲೋಟಿ, ವರ್ತೂರು ಡೆಲ್ಲಿ ಪಬ್ಲಿಕ್ ಶಾಲೆ, ಗೋವಿಂದಪುರ ಇಂಡಿಯನ್ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಮೇಲ್ ಬಂದಿವೆ.
ಈಗಾಗಲೇ ಭಯೋತ್ಪಾದಕ ನಿಗ್ರಹ ದಳ - ಸಿಸಿಬಿ ಪೊಲೀಸ್ರು ಬಹುತೇಕ ಎಲ್ಲ ಶಾಲೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಇಲ್ಲಿವರೆಗೂ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆ ಆಗಿಯೇ ಇಲ್ಲ. ಆದರೂ ಶಾಲೆಯ ಪಾರ್ಕಿಂಗ್,ಗಾರ್ಡನ್,ಮೇಲ್ಛಾವಣಿ ಹೀಗೆ ಎಲ್ಲೆಡೆ ಬಾಂಬ್ ಸ್ಕ್ವಾಡ್ ಪರಿಶೀಲನೆ ಮಾಡುತ್ತಲೇ ಇವೆ.
ನಕಲಿ ಮೇಲ್ ಐಡಿ ಬಳಸಿಕೊಂಡು ಶಾಲೆಗಳಿಗೆ ಮೇಲ್ ಮಾಡಿರೋ ಶಂಕೆ ಇದೆ. ಈ ಕಾರಣಕ್ಕೇನೆ ಈಗ ಸೈಬರ್ ಪೊಲೀಸರೂ ತನಿಖೆಯಲ್ಲಿ ನಿರತರಾಗಿದ್ದಾರೆ. SSLC ಪರೀಕ್ಷೆ ನಡೆಯುತ್ತಿರೋ ಹಿನ್ನೆಲೆಯಲ್ಲಿಯೇ ಬಾಂಬ್ ಬೆದರಿಕೆ ಬಂದಿರೋದು ಪೊಲೀಸರಿಗೆ ಸಾಕಷ್ಟು ಅನುಮಾನ ಮೂಡಿಸಿದೆ.
PublicNext
08/04/2022 03:21 pm