ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಕ್ಸಾಂಗೆ ಬಲಿಯಾದ ವಿದ್ಯಾರ್ಥಿ !

ಬೆಂಗಳೂರಿನಲ್ಲಿ ದಿನನಿತ್ಯ ಒಂದಲ್ಲ ಒಂದು ಘಟನೆ ಸ್ಕೂಲ್,ಕಾಲೇಜ್ ಗಳಲ್ಲಿ‌ ನಡೆಯುತ್ತಲೇ ಇರುವೆ. ಆದರೆ ಯಾವುದು ಸಹ ಬೆಳಕಿಗೆ ಬರೋದಿಲ್ಲ.ಶಾಲೆಯಲ್ಲಿ ಶಿಕ್ಷಕರು ಗದರಿದ್ರು ಅವಮಾನ ಆಯ್ತು ಅನ್ನೊ ಮನಸ್ಥಿತಿಗೆ ಮಕ್ಕಳು‌ ಈಗ

ತಲುಪುತಿದ್ದಾರೆ.

ರಾಜರಾಜೇಶ್ವರಿ ನಗರ ಸ್ವರ್ಗರಾಣಿ ಸ್ಕೂಲ್‌ನಲ್ಲಿ ಎಂಟನೇ ತರಗತಿ ಮುಖ್ಯ ಪರೀಕ್ಷೆ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿ ಧೀರಜ್ ಕಾಪಿ ಹೊಡೆಯುತ್ತಿದ್ದ ಅಂತ ಟೀಚರ್ ಪ್ರಿನ್ಸಿಪಾಲ್ ರೂಮ್‌ಗೆ ಕರೆದುಕೊಂಡು ಹೋಗುತ್ತಾರೆ. ನಂತರ ಧೀರಜ್ ಪೋಷಕರನ್ನು ಶಾಲೆಗೆ ಕರೆಸಿ, ಮಾಹಿತಿ ತಿಳಿಸಿತ್ತಾರೆ. ಅವರ ಕೈನಲ್ಲಿ‌ ಅಪಾಲಜಿ ಲೆಟರ್ ಬರೆಸಿಕೊಳ್ಳುತ್ತಾರೆ. ಹೀಗಾಗಿ ಮನ ನೊಂದ ವಿದ್ಯಾರ್ಥಿ ಮನೆಯಲ್ಲಿ ನಿನ್ನೆ ಸಂಜೆ ನೇಣಿಗೆ ಶರಣಾಗಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ.

ಇತ್ತೀಚಿನ ದಿನಗಳಲ್ಲಿ ಯಾಕೆ ಮಕ್ಕಳ ಮನಸ್ಥಿತಿ ಹದಗೆಡುತಿದ್ಯೋ ಗೊತ್ತಿಲ್ಲ. ಮಕ್ಕಳಿಗೆ ಒಂದು‌ ಮಾತು ಬೈಯೋದಕ್ಕೂ ಭಯವಾಗುತ್ತದೆ. ಎಲ್ಲಿ ಏನ್ ಕಲ್ಪಿಸಿಕೊಳ್ತಾರೊ ಅಂತ. ಮಕ್ಕಳೇ ಆಗಲಿ, ಪೋಷಕರೆ ಆಗಲಿ, ಸುತ್ತ-ಮುತ್ತಾ ಜನಗಳೆ ಆಗಲಿ, ಮಕ್ಕಳ ಕೈಯಲ್ಲಿ ಮೊಬೈಲ್, ಲ್ಯಾಪ್‌ ಟಾಪ್‌ ಕೊಡುವ ಬದಲು, ಓದಲು ಒಳ್ಳೊಳ್ಳೆ ಪುಸ್ತಕ‌‌ ಕೊಡಬೇಕು. ಆಗಲಾದ್ರು ಬುದ್ಧಿ ಶಕ್ತಿ ಬೆಳೆಯುತ್ತದೆ. ಮಕ್ಕಳ ಮನಸ್ಸು ಇನ್ನಷ್ಟು ಮತ್ತಷ್ಟು ಸ್ಟ್ರಾಂಗ್ ಆಗುತ್ತದೆ.

Edited By : Manjunath H D
PublicNext

PublicNext

24/03/2022 07:22 pm

Cinque Terre

41.2 K

Cinque Terre

3

ಸಂಬಂಧಿತ ಸುದ್ದಿ