ಬೆಂಗಳೂರು: ಇಡೀ ರಾಜ್ಯದಲ್ಲಿ ಹಿಜಾಬ್ ವಿಚಾರ ನಿಗಿ ನಿಗಿ ಕೆಂಡವಾಗಿ ಬಿಟ್ಟಿದೆ. ಇದೇ ವೇಳೆಯಲ್ಲಿಯೇ ಚೆಂದ್ರಾಲೇಔಟ್‌ನ ಖಾಸಗಿ ಶಾಲೆಯಲ್ಲಿ ಪೋಷಕರು ಮತ್ತು ಶಾಲೆಯ ಆಡಳಿತ ಮಂಡಳಿಯಲ್ಲಿ ದೊಡ್ಡ ಗಲಾಟೆನೇ ಆಗಿ ಬಿಟ್ಟಿದೆ. ಆದರೆ ವಿಷಯ ಬೇರೆನೆ ಇದೆ.ಬನ್ನಿ, ಹೇಳ್ತೀವಿ.
ಇದು ಹಿಜಾಬ್ ವಿಚಾರ ಅಲ್ಲವೇ ಅಲ್ಲ. ಪೋಷಕರು ಇಲ್ಲಿ ಬಂದು ಗಲಾಟೆ ಮಾಡಿದ್ದು ಬೇರೆ ವಿಷಯಕ್ಕೇನೆ. ಇದು ಹಿಜಾಬ್ ವಿಷಯ ಅಂತಲೇ ಬಿಂಬಿಸಲಾಗಿತ್ತು.
ಅಸಲಿಗೆ ಇಲ್ಲಿಯ ಶಿಕ್ಷಕಿ ಅವಾಚ್ಯ ಶಬ್ದಗಳಿಂದ ಬಳಸಿ ಬೈದಿದ್ದರು. ಅದಕ್ಕೇನೆ ಫೋಷಕರು ಇಲ್ಲಿ ಬಂದು ಗಲಾಟೆ ಮಾಡಿದ್ದರು. ಉಳಿದಂತೆ ಈಗ ಶಿಕ್ಷಕಿಯನ್ನ ಶಾಲಾ ಆಡಳಿತ ಮಂಡಳಿ ವಜಾಗೊಳಿಸಿದೆ.
ಅದ್ಯಾವ ಕಾರಣಕ್ಕೆ ಶಿಕ್ಷಕಿ ಅವಾಚ್ಯ ಶಬ್ದ ಬಳಸಿದರು ಅನ್ನೋದನ್ನ ತನಿಖೆ ಮಾಡಿ ಅಂತಲೇ ಚಂದ್ರಾಲೇಔಟ್ ಪೊಲೀಸರಿಗೆ ಪೋಷಕರು ಮತ್ತು ವಿದ್ಯಾರ್ಥಿಗಳು ದೂರು ನೀಡಿದ್ಆರೆ.
ಚಂದ್ರಾಲೇಔಟ್ ಖಾಸಗಿ ಶಾಲೆಯಲ್ಲಿ ಇಂದು ಗಲಾಟೆ ನಡೆಯಿತು. ಪೋಷಕರು ಬಂದು ಶಾಲೆಯಲ್ಲಿಯೇ ವಿಚಾರ,ಶಿಕ್ಷಕಿ ಬೈದಿದ್ದಕ್ಕೆ ಪೋಷಕರು ಶಾಲೆ ಬಳಿ ಬಂದು ಗಲಾಟೆ ಮಾಡಿದ್ರು. ಆದ್ರೆ ಈ ವಿಚಾರ ಹಿಜಾಬ್ ವಿಚಾರಕ್ಕೆ ಗಲಾಟೆ ಎನ್ನುವಂತೆ ಬಿಂಬಿತವಾಗಿತ್ತು.
PublicNext
12/02/2022 03:38 pm