ಬೆಂಗಳೂರು : ನಗರದ ಶೇಷಾದ್ರಿಪುರಂ ಪೊಲೀಸ್ ಠಾಣೆ ಪೊಲೀಸರು ನಟ ಚೇತನ್ ಅವರನ್ನು ವಶಕ್ಕೆ ಪಡೆದಿರುವ ಕುರಿತು ಪತ್ನಿ ಮೇಘಾ ಹೇಳಿದ್ದು ಹೀಗೆ.
ನಾನು ಮನೆಯಲ್ಲಿ ಇದ್ದೆ ಅವರಿಗೆ ಫೋನ್ ಮಾಡಿದ್ದೆ,ಆದ್ರೆ ಅವರಿಗೆ ಫೋನ್ ರೀಚ್ ಆಗಲ್ಲ. ಆ ಮೇಲೆ ಮನೆ ಸಿಬ್ಬಂದಿ ಹೇಳಿದ್ರು ಪೊಲೀಸ್ ಬಂದು ಕರೆದುಕೊಂಡು ಹೋದ್ರು ಅಂತ.
ಇನ್ನು ಪೊಲೀಸ್ ವ್ಯಾನ್ ನಲ್ಲಿ ಬಂದು ಕರೆದುಕೊಂಡು ಹೋಗಿದ್ದಾರೆ ಎನ್ನುವ ಸುದ್ದಿ ಕೇಳಿ ನಾನು ಪೊಲೀಸ್ ಠಾಣೆಗೆ ಬಂದು ಕೇಳ್ತಾ ಇದ್ದಿನಿ ಇಲ್ಲಿ ಪೊಲೀಸ್ರು ನನಗೆ ಗೊತ್ತಿಲ್ಲ ಅಂತ ಹೇಳ್ತಾ ಇದ್ದಾರೆ.
ನನ್ನ ಗಂಡ ಎಲ್ಲಿ ಹೋಗಿದ್ದಾರೆ ಅಂತಾ ಗೊತ್ತಾಗ್ತಾ ಇಲ್ಲ. ನಾನು ಸೀನಿಯರ್ ಆಫೀಸರ್ಸ್ ನ ಕೇಳಿದ್ರು ಗೊತ್ತಿಲ್ಲ ಅಂತಿದ್ದಾರೆ.
ಹೀಗಾಗಿ ನಾನು ಮಿಸ್ಸಿಂಗ್ ಕಂಪ್ಲೇಂಟ್ ಕೊಡ್ತೀನಿ,ಸದ್ಯ ಪೊಲೀಸ್ರಿಂದ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಅವರ ಗನ್ ಮ್ಯಾನ್ ಕೂಡ ಕಾಣ್ತಿಲ್ಲ ಫೋನ್ ಸ್ವಿಚ್ ಅಪ್ ಆಗಿದೆ. ಅವರು ತುಂಬಾ ಟ್ವೀಟ್ ಮಾಡ್ತಿದ್ರು ಯಾವ ಟ್ವೀಟ್? ಯಾವ ಕಂಪ್ಲೇಂಟ್ ಯಾರು ಕೊಟ್ಟಿದ್ದಾರೆ ನನಗೆ ಯಾವೂದೇ ಮಾಹಿತಿಯನ್ನು ಪೊಲೀಸರು ನೀಡುತ್ತಿಲ್ಲ ಎಂದು ಹೇಳಿದ್ದಾರೆ.
PublicNext
22/02/2022 08:30 pm