This is a modal window.
Beginning of dialog window. Escape will cancel and close the window.
End of dialog window.
ಬೆಂಗಳೂರು:ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಸಮೀಪದ ನಾಗವಾರ ಕೆರೆಯ ಲುಂಬಿನಿ ಗಾರ್ಡ್‌ನಲ್ಲಿ ಡಾಕ್ಟರ್ ರಾಜಕುಮಾರ್ ನೆನಪಿಗಾಗಿ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿತ್ತು. ನಾಗವಾರ ಕೆರೆಯ ದೋಣಿ ವಿಹಾರ ಕೇಂದ್ರಕ್ಕೆ ಡಾ.ರಾಜಕುಮಾರ್ ಹೆಸರಿಟ್ಟು ಕಂಚಿನ ಪ್ರತಿಮೆನ ಇಡಲಾಗಿತ್ತು. ಹೆಬ್ಬಾಳ ಕೃಷ್ಣರಾಜಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೆ ನಾಗವಾರ ಕೆರೆಯ ಅಂಗಳದಲ್ಲಿದ್ದ ಪ್ರತಿಮೆ ಮೇಲೆ ಕಳ್ಳರ ಕಣ್ಣು ಬಿದ್ದಿದೆ.
ಕಳೆದ ಜನವರಿ 24 ರಂದು ಅರಣ್ಯ ಇಲಾಖೆ ಸಿಬ್ಬಂದಿ ಪಾರ್ಕ್ ಸ್ವಚ್ಛಗೊಳಿಸುವ ವೇಳೆ ಪ್ರತಿಮೆ ಕದ್ದೊಯ್ದಿರುವುದು ಪತ್ತೆಯಾಗಿದೆ. ಕೂಡಲೆ ಅರಣ್ಯ ಇಲಾಖೆಯ ಅಧಿಕಾರಿ ಯೋಗೇಶ್ ಅಮೃತಹಳ್ಳಿ ಪೊಲೀಸ್ ಠಾಣೆಗೆ ಪ್ರತಿಮೆ ನಾಪತ್ತೆ ಬಗ್ಗೆ ದೂರು ನೀಡಿದ್ದಾರೆ.
ಕೆರೆಯಂಗಳದ ಬೋಟಿಂಗ್ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ನೋಡಲು ವೀಕೆಂಡ್‌ನಲ್ಲಿ ಜನಜಾತ್ರೆ ಹರಿದು ಬರುತ್ತಿತ್ತು. ಆದರೆ ಕೊರೊನಾ ಹಿನ್ನೆಲೆ ಪಾರ್ಕ್ ಬಂದ್ ಮಾಡಿದ್ದರು. ಈ ಕಾರಣಕ್ಕೇನೆ ಕಳ್ಳರು ಪ್ರತಿಮೆಯನ್ನ ಕದ್ದು ಗುಜರಿಗೆ ಹಾಕಿದ್ದಾರೆ ಎನ್ನಲಾಗ್ತಿದೆ.
ಸದ್ಯ ಇಬ್ಬರು ಶಂಕಿತ ಆರೋಪಿಗಳನ್ನ ವಶಕ್ಕೆ ಪಡೆದಿರುವ ಅಮೃತಹಳ್ಳಿ ಪೊಲೀಸರು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
PublicNext
06/02/2022 10:34 pm