ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಗಟ್ಟಿಮೇಳ‌ ಸೀರಿಯಲ್ ಸ್ಟಾರ್ಸ್ ಲೇಟ್ ನೈಟ್ ಡಿನ್ನರ್‌ಗೆ ಕರ್ಫ್ಯೂ ಅಡ್ಡಿ

ಬೆಂಗಳೂರು: ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟ ರಕ್ಷ್ ಹಾಗೂ ಅಭಿ ಮತ್ತು ಆತನ ಸಹಚರರ ಲೇಟ್ ನೈಟ್ ಡಿನ್ನರ್ ಗೆ ನೈಟ್ ಕರ್ಫ್ಯೂ ಅಡ್ಡಿಯಾಗಿದೆ.

ಈ ಸಂಬಂಧ ಸ್ಥಳೀಯರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಂಗೇರಿ ಬಳಿ ಜಿಂಜರ್ ಲೇಕ್ ವ್ಯೂ ಹೋಟೆಲ್ ಗೆ ನಿನ್ನೆ ರಾತ್ರಿ ಊಟಕ್ಕಾಗಿ ರಕ್ಷಿತ್ ಸ್ನೇಹಿತರಾದ ರಂಜನ್, ಅನುಷಾ, ಅಭಿಷೇಕ್ ಹಾಗೂ ಶರಣ್ಯ ಬಂದಿದ್ದಾರೆ.‌

ಈ ವೇಳೆ ಸ್ಥಳೀಯರು ನೈಟ್ ಕರ್ಫ್ಯೂ ಇದ್ರೂ ಹೊಟೇಲ್ ಓಪನ್ ಆಗಿದೆ ಎಂದು ಕಂಟ್ರೋಲ್ ರೂಮ್ ಗೆ ದೂರು ನೀಡಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ್ದಾರೆ ಪೊಲೀಸ್ರು ಹೊಟೇಲ್ ಸಿಬ್ಬಂದಿ ಮತ್ತು ರಕ್ಷ್ ನ‌ಪೊಲೀಸ್ರು ಪ್ರಶ್ನಿಸಿದ್ದಾರೆ.‌ ಈ ವೇಳೆ ಪೊಲೀಸರಿಗೆ ಮಾತಿನ ಚಕಮಕಿ ನಡೆಸಿದ್ದಾರೆ ಎನ್ನಲಾಗ್ತಿದೆ.

ಬಳಿಕ ಪೊಲೀಸರು 7 ಜನರನ್ನು ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ. ರಾತ್ರಿ ಕರ್ಫ್ಯೂ ವೇಳೆ ನಿಯಮ ಉಲ್ಲಂಘಿಸಿ ಹಿನ್ನೆಲೆಯಲ್ಲಿ ಎನ್ ಡಿಎಂ‌ಎ ಅಡಿ ಪ್ರಕರಣ ದಾಖಲಿಸಿ ಫೈನ್ ಕಟ್ಟಿಸಿಕೊಂಡು ಕಿರುತೆರೆ ನಟರನ್ನು ಕುಳುಹಿಸಿದ್ದಾರೆ.

Edited By :
PublicNext

PublicNext

28/01/2022 06:31 pm

Cinque Terre

35.74 K

Cinque Terre

0

ಸಂಬಂಧಿತ ಸುದ್ದಿ