ಬೆಂಗಳೂರು: ನಾವು ಹಂಸಲೇಖ ಪರವಾಗಿ ಹೋರಾಟ ಮಾಡ್ತಿವಿ ಅವರನ್ನು ಅಪರಾಧಿಯನ್ನಾಗಿ ಮಾಡಿ ಜೈಲಿಗೆ ಹಾಕೋದು ಸರಿಯಲ್ಲ ಎಂದು ನಟ ಚೇತನ್ ಹೇಳಿದ್ದಾರೆ. ಇಂದು ಸಂವಿಧಾನ ಸಮರ್ಪಣಾ ದಿನ ಪ್ರಜಾಪ್ರಭುತ್ವದ ಅಡಿಪಾಯ ನಾವು ಉಳಿಸಿಕೊಳ್ಳಬೇಕ. ಹಂಸಲೇಖ ಮಾತನಾಡಿರುವುದಕ್ಕೆ ಅವರಿಗೆ ಹಕ್ಕಿದೆ. ಅದಕ್ಕೆ ಅವರು ಕ್ಷಮೆ ಕೂಡ ಕೇಳಿದ್ದಾರೆ .
ಆದ್ರೂ ಪೊಲೀಸ್ ಠಾಣೆಗೆ ಬಂದಿದ್ದಾರೆ. ಕೆಲವರು ಅವರನ್ನು ಜೈಲಿಗೆ ಹಾಕಿಸುವ ಪ್ರಯತ್ನ ಮಾಡಿದ್ದಾರೆ. ಇದು ಸಹಿಸಲು ಆಗೋದಿಲ್ಲ. ಹಾಗಾಗಿ ನಾವು ವಾಕ್ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕು ಇಲ್ಲಿ ಹಿಂಸೆ ಪ್ರಚೋದನೆ ಮಾಡಿಲ್ಲ ಬರೀ ಮಾತನಾಡಿದ್ದಕ್ಕೆ ಬ್ರಾಹ್ಮಣ ಸಮುದಾಯದವರು ದಮ್ಕಿ ಹಾಕಿದ್ದಾರೆ.
ಮಹಿಳೆಯರಿಗೆ ಬ್ರಾಹ್ಮಣರು ಮರ್ಯಾದೆ ಕೊಡಬೇಕು. ಅದನ್ನ ಬಿಟ್ಟು ಬೃಂದಾವನಕ್ಕೆ ಬಂದು ಕ್ಷಮೆ ಕೇಳಿ ಎಂದಿದ್ದಾರೆ.
Kshetra Samachara
26/11/2021 03:17 pm