ಬೆಂಗಳೂರು: ಬ್ಯಾಂಕ್‌ನಲ್ಲಿ ಖೋಟಾ ನೋಟು ಚಲಾವಣೆಗೆ ಮುಂದಾದ ಖರ್ತನಾಕ್ ಲೇಡಿಯನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಶೀಲಾ ಬಂಧಿತ ಆರೋಪಿಯಾಗಿದ್ದು ಬ್ಯಾಂಕ್ ಸಿಬ್ಬಂದಿಗೆ ಯಾಮಾರಿಸಿ ಸುಮಾರು ಹನ್ನೊಂದು ಸಾವಿರ ನೂರು ರೂಪಾಯಿಯ ನೋಟುಗಳನ್ನ ಬ್ಯಾಂಕ್‌ಗೆ ನೀಡಿದ್ದಳು. ದಾಖಲಾತಿ ಕೆದಕುವ ಸಂದರ್ಭದಲ್ಲಿ ಶೀಲಾ ಎಸ್ಕೇಪ್ ಆಗಿದ್ಲು. 100 ರೂ ಮುಖ ಬೆಲೆಯ ನೋಟು ಚಲಾವಣೆ ಮಾಡಿದ್ದ ಆರೋಪಿ ಶೀಲಾ ಕೊಟ್ಟ ನೋಟುಗಳನ್ನು ಜಯನಗರದ ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಪರಿಶೀಲನೆ ನಡೆಸಿದ ವೇಳೆ ವಿಚಾರ ಗೊತ್ತಾಗಿದೆ.
ಪ್ರಕರಣದ ಮಾಹಿತಿ ಮೇರಗೆ ಆರೋಪಿತೆಯನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ವಿಚಾರಣೆ ವೇಳೆ ಮತ್ತೊಬ್ಬ ಲೇಡಿಯ ಮಾಹಿತಿ ಬಹಿರಂಗ ಪಡಿಸಿದ್ದಾಳೆ ಶೀಲಾ. ಇದೀಗ ಈಕೆಯ ಹಿಂದೆ ಇರುವವರಿಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Kshetra Samachara
22/08/2022 10:27 pm