ಬೆಂಗಳೂರು: ಪ್ರತಿಷ್ಠಿತ ಮೆಟ್ರೋ ಶಾಪಿಂಗ್ ಮಾಲ್ ಮಾಲೀಕರಿಗೆ ಪೋಸ್ಟ್ ಮೂಲಕ ಬಂದ ಜೀವ ಬೆದರಿಕೆ ಪತ್ರ ಬಂದಿದೆ.
ಮೆಟ್ರೋ ಶಾಪಿಂಗ್ ಮಾಲ್ ಅನ್ನು ಮಾರಾಟ ಮಾಡಬೇಕು. ಇಲ್ಲದಿದ್ದರೆ ಜೀವಂತವಾಗಿ ಉಳಿಸೋದಿಲ್ಲ ಎಂದು ಪತ್ರ ತಮಿಳು ಭಾಷೆಯಲ್ಲಿ ಪತ್ರ ಮುಖೇನ ಬೆದರಿಕೆ ಹಾಕಲಾಗಿದೆ ಎಂದು ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೆಟ್ರೋ ಸಾಪಿಂಗ್ ಮಾಲ್ ಅನ್ನು ರಿಲಯನ್ಸ್ ಅಂಬಾನಿ, ಟಾಟಾ ಅಥವಾ ವಿಪ್ರೋ ಕಂಪನಿಗೆ ಮಾರಾಟ ಮಾಡಬೇಕು ಎಂದು ಧಮ್ಕಿ ಹಾಕಿ ಬೆದರಿಕೆ ಪತ್ರ ಬರೆಯಲಾಗಿದೆ. ಈ ಕಂಪನಿಗೆ ಬಿಟ್ಟು ಹೆಚ್‌ಸಿಎಲ್ ಕಂಪನಿಗೆ ಮಾರಾಟ ಮಾಡಿದರೆ ಮೆಟ್ರೋ ಎಂಡಿ ಹಾಗೂ ಸಿಇಒ ಅರವಿಂದ್ ಮೆಡರೆಟ್ಟ ರನ್ನ ಜೀವಂತವಾಗಿ ಉಳಿಸೋದಿಲ್ಲ ಎಂದು ಪತ್ರದಲ್ಲಿ ಬೆದೆರಿಕೆಯೊಡ್ಡಲಾಗಿದೆ.ಈ ಸಂಬಂಧ ದೂರು ದಾಖಲಿಸಿಕೊಂಡಿರೋ ಸುಬ್ರಹ್ಮಣ್ಯನಗರ ಪೊಲೀಸ್ ತನಿಖೆ ಮುಂದುವರಿಸಿದ್ದಾರೆ.
PublicNext
20/06/2022 02:38 pm