ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಾಶ್ಮಿನ ಡೆವಲಪರ್ಸ್ ವಿರುದ್ಧ ವಂಚನೆ ಆರೋಪ

ಬೆಂಗಳೂರು: ಅರ್ಧದಷ್ಟು ಹಣ ಸಂದಾಯವಾದರೂ ನಿಗದಿತ ಸಮಯಕ್ಕೆ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ನೀಡದೇ ವಂಚಿಸುತ್ತಿದ್ದಾರೆಂದು ಫ್ಲ್ಯಾಟ್ ಖರೀಸಿದವರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಮಂಡೂರು ಬಳಿಯ ಬೈಯಪ್ಪನಹಳ್ಳಿಯಲ್ಲಿ ಪಾಶ್ಮಿನ ಡೆವಲಪರ್ಸ್‌ನಿಂದ ನಿರ್ಮಿಸಲಾಗಿರುವ ಅಪಾರ್ಟ್‌ಮೆಂಟ್ ಎದುರು ಖರೀದಿದಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. 2019ರಲ್ಲಿ ಅರ್ಧದಷ್ಟು ಹಣ ಮುಂಗಡ ನೀಡಲಾಗಿದ್ದು, 2020 ಮಾರ್ಚ್ ವೇಳೆಗೆ ಫ್ಲ್ಯಾಟ್‌ಗಳನ್ನು ನೀಡುವುದಾಗಿ‌ ಹೇಳಲಾಗಿತ್ತು. ಆದರೆ ಇದುವರೆಗೂ ಫ್ಲ್ಯಾಟ್ ನೀಡದ ಕಾರಣ ಖರೀದಿದಾರರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಇಷ್ಟು ದಿನ ಕೊರೊನಾ ನೆಪವೊಡ್ಡಿ ಕಾಮಗಾರಿ ಮುಗಿದಿಲ್ಲವೆಂದು ಫ್ಲ್ಯಾಟ್ ನೀಡಲು ನಿರಾಕರಿಸಿದ್ದರು. ಆದರೆ ಎರಡು ವರ್ಷಗಳಿಂದೆ ಫ್ಲ್ಯಾಟ್ ನೀಡದೆ ವಂಚಿಸುತ್ತಿದ್ದಾರೆ ಎಂದು ಖರೀದಿದಾರ ಪ್ರವೀಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Manjunath H D
PublicNext

PublicNext

02/03/2022 07:24 pm

Cinque Terre

31.12 K

Cinque Terre

0

ಸಂಬಂಧಿತ ಸುದ್ದಿ