ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿ ಬೂದಿಗೆರೆ ಕೆರೆಯಲ್ಲಿ ಮೃತಪಟ್ಟ ಬಿಪಿನ್ ಮೃತದೇಹ 25ಗಂಟೆ ನಂತರ ಪತ್ತೆ

ಬೆಂಗಳೂರು: ದೇವನಹಳ್ಳಿ ತಾಲೂಕಿನ ಬೂದಿಗೆರೆ ಕೆರೆಯಲ್ಲಿ ಈಜಲು ಬಂದಿದ್ದ ಬಿವಿನ್ ಎಂಬ 18ವರ್ಷದ ಯುವಕ ನೀರಲ್ಲಿ‌ ಮುಳುಗಿ ಸಾವನ್ನಪ್ಪಿದ್ದ. ಈತನ ಜೊತೆ ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿಯ ಉಯದನಗರದಿಂದ ಬಂದಿದ್ದ ಮೂರು ಜನ‌ ಯುವಕರು ಬಚಾವಾಗಿದ್ರು. ನಿನ್ನೆ ನಾಲ್ಕು ಗಂಟೆಗೆ ಸ್ಥಳಕ್ಕಾಗಮಿಸಿದ್ದ ಚನ್ನರಾಯಪಟ್ಟಣ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮೃತದೇಹಕ್ಕಾಗಿ ಎಷ್ಟೇ ಹುಡುಕಾಟ ನಡೆಸಿದ್ರೂ ಪತ್ತೆಯಾಗಿರಲಿಲ್ಲ.

ಇಂದು ಬೆಳಗ್ಗೆ 8ಗಂಟೆಯಿಂದ ಶವಕ್ಕಾಗಿ ಎಷ್ಟೇ ಶೋಧಾಕಾರ್ಯ ನಡೆಸಿದರೂ ಪತ್ತೆಯಾಗಿಲಿಲ್ಲ. ಸಂಜೆಯವರೆಗೂ ಅಗ್ನಿಶಾಮಕ ಸಿಬ್ಬಂದಿ ‌ಹುಡುಕಿ ಹುಡುಕಿ ಸುಸ್ತಾಗಿದ್ದರು. ಸಂಜೆ ಬೂದಿಗೆರೆಯ ಸ್ಥಳೀಯ ಯುವಕರು ಬಿಪಿನ್ ಮೃತದೇಹ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಕೂಡ ಮೃತದೇಹ ಸಿಗುವುದಿಲ್ಲ ಎಂಬ ನಿರುತ್ಸಾಹದಲ್ಲಿದ್ದ ಜನರಿಗೆ ಬೂದಿಗೆರೆ ಯುವಕರ ಶ್ರಮ ಸಮಾಧಾನ ತಂದಿದೆ.

ಮೃತ ಬಿಪಿನ್ ಇಂದಿರಾನಗರದ ಕೈರಳಿ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿದ್ದ. ತಂದೆ ಖಾಸಗಿ ಕಂಪನಿ ನೌಕರ. ಒಬ್ಬ ಮಗಳು ಮತ್ತು ಒಬ್ಬ ಮಗನ ಜೊತೆ ಅನ್ನೋನ್ಯವಾಗಿದ್ದ ತಂದೆ-ತಾಯಿ ಈಗ ಮಗನನ್ನು ಕಳೆದುಕೊಂಡು ದುಃಖಸಾಗರದಲ್ಲಿ ಮುಳುಗಿದ್ದಾರೆ. ಆಸರೆಯಾಗಿ ಮನೆ ಕಾಯಬೇಕಿದ್ದ ಮಗ ಕೆರೆಯಲ್ಲಿ ಈಜಲು ಹೋಗಿ ಇಹಲೋಕ ತ್ಯಜಿಸಿರುವುದು ದುರಂತವೇ ಸರಿ.

ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ ಬೆಂಗಳೂರು

Edited By : Nagesh Gaonkar
PublicNext

PublicNext

05/06/2022 10:55 pm

Cinque Terre

42.44 K

Cinque Terre

0

ಸಂಬಂಧಿತ ಸುದ್ದಿ