ಬೆಂಗಳೂರು: ನಿರ್ಮಾಣ ಹಂತದಲ್ಲಿದ್ದ ರಾಜಕಾಲುವೆ ಛಾವಣಿ ಕುಸಿದು ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ಶ್ರೀನಗರದ ಕಾಳಿದಾಸ ಬಸ್ ನಿಲ್ದಾಣ ಬಳಿ ಈ ಅವಾಂತರ ನಡೆದಿದೆ. ಕೊಲ್ಕತ್ತಾ ಮೂಲದ ಮೀರ್ ಖಾಸಿಂ ಗಂಭೀರವಾಗಿ ಗಾಯಗೊಂಡಿದ್ದಾನೆ. ಆಸಿಬುಲ್, ಶಿವಪ್ರಸಾದ್ ಹಾಗೂ ರೆಹಮಾನ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡವರೆಲ್ಲರೂ ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದವರಾಗಿದ್ದಾರೆ.
ಹಲವು ತಿಂಗಳಿಂದ ರಾಜಕಾಲುವೆ ನಿರ್ಮಾಣದಲ್ಲಿ ಕಾರ್ಮಿಕರು ತೊಡಗಿಸಿಕೊಂಡಿದ್ದರು. ಇಂದು ಬೆಳಗ್ಗೆ ಏಳು ಮಂದಿ ಕಾರ್ಮಿಕರು ಕಾಂಕ್ರೀಟ್ ಹಾಕುವಾಗ ಏಕಾಏಕಿ ರಾಜಕಾಲುವೆ ತಡೆಗೋಡೆ ಕುಸಿದಿದೆ. ಇದರ ಪರಿಣಾಮ ಸಿಮೆಂಡ್ ಹಾಗೂ ಕಬ್ಬಿಣದ ಸರಳುಗಳ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ. ಓರ್ವ ಗಂಭೀರ ಗಾಯಗೊಂಡು ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಗಿರಿನಗರ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.
PublicNext
24/05/2022 03:26 pm