ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆಯಾದ ಒಂದೇ ವರ್ಷಕ್ಕೆ ಬಾರದ ಲೋಕಕ್ಕೆ ಯುವತಿ ಪಯಣ

ಆನೇಕಲ್:ಗೃಹಿಣಿಯೊಬ್ಬಳು ರೈಲ್ವೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಮರಸೂರು ಗ್ರಾಮದಲ್ಲಿ ನಡೆದಿದೆ.

ಮರಸೂರು ಮೂಲದ ರಮ್ಯ (19) ಮೃತಪಟ್ಟ ದುರ್ದೈವಿ ಇನ್ನು ರಮ್ಯಾ ತಮಿಳುನಾಡು ಮೂಲದವರಾಗಿದ್ದು ಮರಸೂರು ಗ್ರಾಮದ ಅಂಜಿ ಎಂಬುವವರನ್ನು ಮದುವೆ ಮಾಡಿಕೊಂಡಿದ್ದರು .ಮದುವೆ ನಡೆದು ಒಂದು ವರ್ಷ ಕಳೆದಿತ್ತು. ಆದರೆ ಕಳೆದ ರಾತ್ರಿ ಮನೆಯಲ್ಲಿ ಗಲಾಟೆ ಮಾಡಿಕೊಂಡ ಕಾರಣ ಮಧ್ಯರಾತ್ರಿ ಹನ್ನೊಂದು ಮೂವತ್ತಕ್ಕೆ ಮನೆಬಿಟ್ಟು ಬಂದಿದ್ದರಂತೆ ಆದರೆ ಇಂದು ರೈಲ್ವೆ ಟ್ರ್ಯಾಕ್ ನ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ ಇನ್ನು ಘಟನಾಸ್ಥಳಕ್ಕೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ. ಈ ಘಟನೆಗೆ ಕಾರಣ ಏನೆಂಬುದು ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

01/05/2022 10:43 pm

Cinque Terre

2.84 K

Cinque Terre

0

ಸಂಬಂಧಿತ ಸುದ್ದಿ