ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಿಟಾಚಿ ಹರಿದು ಮಗು ದುರ್ಮರಣ

ಬೆಂಗಳೂರು: ಹಿಟಾಚಿ ಹರಿದು ಮಗುವೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ಉಪ್ಪಾರಪೇಟೆ ಬಳಿಯ ಧನ್ವಂತರಿ ರಸ್ತೆಯಲ್ಲಿ ನಡೆದಿದೆ.

ಸಿಮಿಯಾನ್ ಎಂಬ ಮೂರು ವರ್ಷ ವಯಸ್ಸಿನ ಗಂಡು ಮಗು ಘಟನೆಯಲ್ಲಿ ಮೃತಪಟ್ಟಿದೆ. ಮಗುವನ್ನು ಗಮನಿಸದೇ ಹಿಂಬದಿಯಿಂದ ಹಿಟಾಚಿ ಹಾಯಿಸಿದ ಪರಿಣಾಮ ಮಗು ಮೃತಪಟ್ಟಿದೆ. ಇಂದು ಬೆಳಿಗ್ಗೆ ತಂದೆ ಡೇವಿಡ್ ಪುತ್ರ ಸಿಮಿಯಾನ್‌ನನ್ನು ಹೊರಗೆ ಕರೆತಂದಿದ್ದರು. ಇದೇ ವೇಳೆ ದುರ್ಘಟನೆ ಸಂಭವಿಸಿದೆ.

ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಿಟಾಚಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Edited By : Nagaraj Tulugeri
PublicNext

PublicNext

01/01/2022 04:14 pm

Cinque Terre

17.46 K

Cinque Terre

0

ಸಂಬಂಧಿತ ಸುದ್ದಿ