ಬೆಂಗಳೂರು: ರಾಜಧಾನಿಯಲ್ಲಿ ಬೆಳ್ಳಂಬೆಳ್ಳಗೆ ಆಟೋಗೆ ಮಿನಿ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಗರದ ಗುಟ್ಟಹಳ್ಳಿ ಬಿಡಿಎ ಫ್ಲೈಓವರ್ ಕೆಳಗೆ ದುರ್ಘಟನೆ ನಡೆದಿದೆ. ಬಾಳೆಹಣ್ಣಿನ ಬಾಕ್ಸ್ ತುಂಬಿಕೊಂಡ ಆಪೇ ಆಟೋ ಸಿಟಿ ಮಾರ್ಕೆಟ್ ಹೊರಟಿತ್ತು. ಇತ್ತ ಕಾವೇರಿ ಥಿಯೇಟರ್‌ನಿಂದ ಬರುತ್ತಿದ್ದ ಮಿನಿ ಕ್ಯಾಂಟರ್ ಹಾಗೂ ಆಟೋ ನಡುವೆ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡಿವೆ.
ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನಾ ಸ್ಥಳಕ್ಕೆ ಹೈಗ್ರೌಂಡ್ಸ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
15/11/2021 11:37 am