ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನನಗೇನೂ ಆಗಿಲ್ಲ-ಎಲ್ಲವೂ ಸುಳ್ಳೆ ಸುಳ್ಳು !

ಬೆಂಗಳೂರು: ಕನ್ನಡದ ಹಾಸ್ಯ ನಟ ಚಿಕ್ಕಣ್ಣ ಈಗ ಹೀರೋ ಆಗಿದ್ದಾರೆ.ಉಪಾಧ್ಯಕ್ಷ ಮೂಲಕ ನಾಯಕನಾಗಿದ್ದೇ ತಡ, ಗಾಸಿಪ್‌ಗಳು ಈಗ ಹೆಚ್ಚು ಹೆಚ್ಚು ಹರಿದಾಡುತ್ತಲೇ ಇವೆ. ಉಪಾಧ್ಯಕ್ಷ ಚಿತ್ರೀಕರಣದ ಸಮಯದಲ್ಲಿ ಚಿಕ್ಕಣ್ಣನಿಗೆ ಗಾಯ ಆಗಿದೆ ಅಂತಲೇ ಬೆಳಗ್ಗಿನಿಂದ ಸುದ್ದಿ ಹಬ್ಬಿದೆ.

ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಚಿತ್ರದ ಚಿತ್ರೀಕರಣ ಸದ್ಯ ಬಸರಾಳ ಹತ್ತಿರದ ತಾರೆಕಟ್ಟೆಯಲ್ಲಿ ನಡೆಯುತ್ತಿದೆ.ಇದೇ ಜಾಗದಲ್ಲಿಯೇ ಚಿತ್ರೀಕರಣದ ವೇಳೆ ಚಿಕ್ಕಣ್ಣನಿಗೆ ಗಾಯವಾಗಿದೆ. ಆಸ್ಪತ್ರೆಗೂ ದಾಖಲಿಸಲಾಗಿದೆ ಅಂತಲೇ ಸುದ್ದಿ ಇದೆ.

ಆದರೆ, ಅದೇ ಜಾಗದಿಂದಲೇ ಚಿಕ್ಕಣ್ಣ ಒಂದು ವೀಡಿಯೋ ಕೂಡ ಮಾಡಿ ಕಳಿಸಿದ್ದಾರೆ. ನಾನು ಸೇಫ್ ಆಗಿಯೇ ಇದ್ದೇನೆ. ನನಗೆ ಏನೂ ಆಗಿಲ್ಲ ಅಂತ ನಗ್ತಾ ನಗ್ತಾನೇ ರಿಯಾಕ್ಟ್ ಮಾಡಿದ್ದಾರೆ. ಆ ವೀಡಿಯೋ ಕೂಡ ಈಗ ವಾಟ್ಸ್‌ಅಪ್‌ ಗಳಲ್ಲಿ ಹರಿದಾಡುತ್ತಿದೆ.

Edited By : Nagesh Gaonkar
PublicNext

PublicNext

02/07/2022 11:02 pm

Cinque Terre

73.8 K

Cinque Terre

0

ಸಂಬಂಧಿತ ಸುದ್ದಿ