ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಳೆ 'ಜೇಮ್ಸ್' ಬಿಡುಗಡೆ; ಸ್ವಾಗತ, ಸಂಭ್ರಮಾಚರಣೆಗೆ ಅದ್ಧೂರಿ ಸಿದ್ಧತೆ

ಬೆಂಗಳೂರು: 'ಪವರ್ ಸ್ಟಾರ್', ಅಭಿಮಾನಿಗಳ ಪ್ರೀತಿಯ ಅಪ್ಪು ಡಾ. ಪುನೀತ್ ರಾಜ್‍ಕುಮಾರ್ ಅವರ 47ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ‌ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ 'ಜೇಮ್ಸ್' ಚಿತ್ರ ಬಿಡುಗಡೆ ಆಗುತ್ತಿರುವುದರಿಂದ ಅಭಿಮಾನಿಗಳು ತಮ್ಮ 'ಆರಾಧ್ಯ ದೈವ'ದ ಹುಟ್ಟುಹಬ್ಬದ ಜೊತೆ ಚಿತ್ರದ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಕೆಆರ್ ಪುರದ ವೆಂಕಟೇಶ್ವರ ಹಾಗೂ ಕೃಷ್ಣ ಚಿತ್ರಮಂದಿರದಲ್ಲಿ 'ಜೇಮ್ಸ್' ಬಿಡುಗಡೆಯಾಗುತ್ತಿದ್ದು, ಈ ಚಿತ್ರಮಂದಿರಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಅಭಿಮಾನಿಗಳು ನಾಳೆ ಅಪ್ಪು ಅವರ ಕಟೌಟ್ ಗೆ ಹಾಲಿನ ಅಭಿಷೇಕ ನೆರವೇರಿಸಲಿದ್ದು, ಚಿತ್ರ ಮಂದಿರಗಳ ಮುಂದೆ ಕಟೌಟ್ ಗಳು ರಾರಾಜಿಸುತ್ತಿವೆ.

Edited By : Manjunath H D
Kshetra Samachara

Kshetra Samachara

16/03/2022 11:09 pm

Cinque Terre

2.38 K

Cinque Terre

0

ಸಂಬಂಧಿತ ಸುದ್ದಿ