ಬೆಂಗಳೂರು: ನಾಳೆ ಜೇಮ್ಸ್ ಜಾತ್ರೆಗೆ ಭದ್ರತಾ ದೃಷ್ಠಿಯಿಂದ ಹೆಲಿಕಾಪ್ಟರ್ ಪುಷ್ಪ ಮಳೆಗೆ ಪೊಲೀಸ್ರು ಬ್ರೇಕ್ ಹಾಕಿದ್ದಾರೆ.
ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದ್ದು. ಅಭಿಮಾನಗಳು ಪವರ್ ಸ್ಟಾರ್ ಚಿತ್ರವನ್ನ ಹಬ್ಬದ ರೀತಿ ರಿಲೀಸ್ ಮಾಡ್ತಿದ್ದಾರೆ.
ಈ ಹಿನ್ನೆಲೆ ಚಿತ್ರ ತಂಡ ಹೆಲಿಕಾಪ್ಟರ್ ಮೂಲಕ ಪುಷ್ಪ ಮಳೆಗೆ ನಿರ್ಧರಿಸಿತ್ತು. ಮೊದಲಿಗೆ ಪುನೀತ್ ಸಮಾಧಿ, ಆ ಬಳಿಕ ವೀರಭದ್ರೇಶ್ವರ ಥಿಯೇಟರ್, ಪ್ರಸನ್ನ ಹಾಗೂ ವೀರೇಶ್ ಥಿಯೇಟರ್ ನಲ್ಲಿ ಪುಷ್ಪ ಮಳೆಗೆ ಚಿತ್ರ ತಂಡ ನಿರ್ಧರಿಸಿತ್ತು.ಇದೀಗ ಭದ್ರತಾ ಕಾರಣದಿಂದ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.
ಹೆಲಿಕಾಪ್ಟರ್ ನೋಡಲು ಹೆಚ್ಚಿನ ಜನ ಸೇರ್ತಾರೆ, ಆ ಸಮಯದಲ್ಲಿ ಕಾಲ್ತುಳಿತ ಸಂಭವಿಸುವ ಸಾಧ್ಯತೆಯಿದೆ.
ಅತಿ ಕೆಳಗೆ ಹೆಲಿಕಾಪ್ಟರ್ ಹಾರಾಡೋದ್ರಿಂದ ಟವರ್, ಬಿಲ್ಡಿಂಗ್ ಗಳು ಅಡ್ಡಿಯಾಗಬಹುದು ಎಂದು ಪೊಲೀಸ್ ಇಲಾಖೆ ಅಭಿಪ್ರಾಯ ಪಟ್ಟಿದೆ. ಇನ್ನೂ ಕೂಡ ಚಿತ್ರ ತಂಡ ಪೊಲೀಸರ ಮನವೊಲಿಸುವ ಯತ್ನ ನಡೆಸುತ್ತಿದ್ದು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
PublicNext
16/03/2022 07:26 pm