ಬೆಂಗಳೂರು : ಕನ್ನಡದಲ್ಲಿ ನೀವೆಲ್ಲಾ ರೌಡಿಸಂ ಚಿತ್ರ ಯಾಕೆ ಮಾಡ್ತೀರಾ!? ಎಂದು IPS ಅಧಿಕಾರಿ ಭಾಸ್ಕರ್ ರಾವ್ ಪ್ರಶ್ನೆ ಮಾಡಿದ್ಧಾರೆ.
ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ಚಿತ್ರದ ಟ್ರೇಲರ್ ಲಾಂಚ್ ವೇಳೆ IPS ಅಧಿಕಾರಿ ಭಾಸ್ಕರ್ ರಾವ್ ಚಿತ್ರದ ಟೈಟಲ್ ಗಳ ಬಗ್ಗೆ ಸಿಡಿಮಿಡಿಗೊಂಡರು.
ಈ ವೇಳೆ ವೇದಿಕೆ ಮೇಲಿದ್ದ ವಸಿಷ್ಠ ಸಿಂಹಗೆ ರೌಡಿ ಎಲಿಮೆಂಟ್ಸ್ ಚಿತ್ರ ಮಾಡ್ಬೇಡಿ ಎಂದಿದ್ದಾರೆ. ಕನ್ನಡದಲ್ಲಿ ರೌಡಿಸಂ ಹಿನ್ನೆಲೆ ಇರೋ ಚಿತ್ರಗಳು ಬರ್ತಿದೆ. ಇದು ಸರಿಯಲ್ಲ ದಂಡುಪಾಳ್ಯ ಸಿನಿಮಾ ನೋಡಿ ಕೊಲೆಗಳು ನಡೆದಿತ್ತು ಎಂದರು.
ಇದರೊಂದಿಗೆ ಸ್ಯಾಂಡಲ್ ವುಡ್ ರೌಡಿಸಂ ಟೈಟಲ್ ಇರುವ ಚಿತ್ರಗಳ ಕಾಲೆಳೆದಿದ್ದಾರೆ.
PublicNext
14/02/2022 09:58 pm