ಬೆಂಗಳೂರು: ಇಂತಹ ಪರಿಸ್ಥಿತಿಯಲ್ಲಿ ನಾನು ನಿಮ್ಮ ಮುಂದೆ ಬಂದು ಮಾತಾಡ್ತೀನಿ ಅಂತ ಅಂದುಕೊಂಡಿರಲಿಲ್ಲ. ರಾಮು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ಅವರು ವಾಪಸ್ ಬಂದೇ ಬರ್ತಾರೆ ಎಂಬ ನಂಬಿಕೆ ನನ್ನಲ್ಲಿದೆ ಎಂದು ನಟಿ ಮಾಲಾಶ್ರೀ ಅಗಲಿದ ಪತಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ನಡೆದ 'ಅರ್ಜುನ್ ಗೌಡ' ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಮುಗೆ ಸಿನಿಮಾನೇ ಉಸಿರು, ಕನಸಾಗಿತ್ತು. ಯಾವುದೇ ಸಿನಿಮಾ ಹಿಟ್ ಆದರೂ ಖುಷಿ ಪಡುತ್ತಿದ್ದರು. ಮನೆಯಲ್ಲಿದ್ದರೆ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು. 'ಅರ್ಜುನ್ ಗೌಡ' ಚಿತ್ರಕ್ಕಾಗಿ ರಾಮು ಕಷ್ಟಪಟ್ಟಿದ್ದಾರೆ. ಅವರು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾರೆ. ವಾಪಸ್ ಬಂದೇ ಬರ್ತಾರೆ ಎಂದ ಮಾಲಾಶ್ರೀ ಭಾವುಕರಾಗಿದ್ದಾರೆ.
PublicNext
28/12/2021 10:41 pm