ಬೆಂಗಳೂರು: ಹೋಗಿ ಬಂದಲ್ಲೆಲ್ಲ ಅಪ್ಪು ಬಗ್ಗೆ ಮಾತಾಡಿ ಮಾತಾಡಿ ಅವನಿಗೆ ನನ್ನ ದೃಷ್ಟಿಯೇ ತಾಕಿತೇನೋ ಎನಿಸುತ್ತಿದೆ ಎಂದು ನಟ ಶಿವರಾಜ್ ಕುಮಾರ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ, ಆತ ಹೊಗಳುವಂತೆಯೇ ಇದ್ದ. ಸುಮಾರು ಸಂದರ್ಶನಗಳಲ್ಲಿ ನನ್ನ ಸ್ಫೂರ್ತಿ ಶಿವಣ್ಣ ಎಂದು ಹೇಳಿದ್ದ. ಪುನೀತ್ ರಾಯಲ್ ಆಗಿ ಹುಟ್ಟಿ ರಾಯಲ್ ಆಗಿದ್ದ. ಇನ್ಮುಂದೆಯೂ ರಾಯಲ್ ಆಗಿ ಇರ್ತಾನೆ ಎಂದುಕೊಂಡಿದ್ದೆವು. ಆದ್ರೆ ಅದಕ್ಕೆ ದೇವರು ಅವಕಾಶ ಮಾಡಿಕೊಡಲಿಲ್ಲ. ಆತ ಮಾಡಿದ ಎಷ್ಟೋ ಸಮಾಜಪರ ಕೆಲಸಗಳು ನನಗೂ ಗೊತ್ತಿರಲಿಲ್ಲ. ಅಪ್ಪು ನಮ್ಮಲ್ಲಿದ್ದಾನೆಂದುಕೊಂಡು ಇರಬೇಕು. ಈಗಿನ ಯುವನಟರೆಲ್ಲರಲ್ಲೂ ನನ್ನ ತಮ್ಮನ ಗುಣ ಕಾಣುತ್ತಿದ್ದೇನೆ ಎಂದ ಶಿವಣ್ಣ ತಮ್ಮ ಮಾತಿನುದ್ದಕ್ಕೂ ಗದ್ಗದಿತರಾಗಿದ್ದರು.
Kshetra Samachara
16/11/2021 10:56 pm