ಬೆಂಗಳೂರು: ಪುನೀತ್ ರಾಜ್ ಕುಮಾರ್ ಸಮಾಧಿ ಮುಂದೆ ಮದುವೆ ಆಗಲು ಇಲ್ಲೊಂದು ಜೋಡಿ ಈಗ ಸಜ್ಜಾಗಿದೆ.ಆದರೆ ಇದಕ್ಕೆ ರಾಜ್ ಫ್ಯಾಮಿಲಿ ಒಪ್ಪಿದಿಯೇ ? ಇಲ್ಲಿದೆ ನೋಡಿ ಇತರ ಡಿಟೈಲ್ಸ್.
ಹುಡುಗನ ಹೆಸರು ಗುರುರಾಜ್. ಮೂಲತಃ ಬಳ್ಳಾರಿಯವರು. ಹುಡುಗಿ ಹೆಸರು ಗಂಗಾ. ಇವರಿಬ್ಬರು ಎರಡು ವರ್ಷದಿಂದಲೇ ಪ್ರೀತಿಸುತ್ತಿದ್ದರು. ಈಗ ಅಪ್ಪು ಸಮಾಧಿ ಮುಂದೇನೆ ಮದುವೆ ಆಗಲು ನಿರ್ಧರಿಸಿದ್ದಾರೆ. ಇವರೇನೋ ನಿರ್ಧರಿಸಿದ್ದಾರೆ ಸರಿ.
ಆದರೆ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಇದಕ್ಕೆ ಪರವಾನಗಿ ಕೊಡ್ಬೇಕಲ್ವೇ. ಹೌದು. ಅದನ್ನ ಪಡೆದಿದ್ದೇವೆ. ಪುನೀತ್ ಸಮಾಧಿ ಬಳಿ ಮದುವೆ ಆಗಲು ಇಬ್ಬರೂ ಒಪ್ಪಿದ್ದಾರೆಂದೇ ಹೇಳಿದೆ ಈ ಜೋಡಿ. ಮದುವೆ ಆಗಲು ನಿರ್ಧರಿಸಿರೋ ಈ ಜೋಡಿ ಮದುವೆ ಡೇಟ್ ಅನ್ನ ಇನ್ನೂ ಅನೌನ್ಸ್ ಮಾಡಿಲ್ಲ.ಆದರೆ ಅಪ್ಪು ಅಪ್ಪಟ ಅಭಿಮಾನಿಗಳಾಗಿರೋ ಇವ್ರು ಮದುವೆ ಆಗೋ ಮೂಲಕ ಪುನೀತ್ ಗೆ ಗೌರವ ಸಲ್ಲಿಸುತ್ತಿದ್ದಾರೆ.
Kshetra Samachara
06/11/2021 06:53 pm