ಬೆಂಗಳೂರು:ಪುನೀತ್ ರಾಜಕುಮಾರ್ ದೀಪಾವಳಿ ಹಬ್ಬಕ್ಕೆ ಶುಭ ಹಾರೈಸಿದ್ದರು. ಅದು ಸಾವಿನ ಮುಂಚಿನ ವೀಡಿಯೋ ಅಲ್ಲ. ಕಳೆದ ವರ್ಷದ ದೀಪಾವಳಿ ಹಬ್ಬಕ್ಕೆ ಪುನೀತ್ ಶುಭ ಕೋರಿದ್ದರು. ಅದೇ ವೀಡಿಯೋ ಈಗ ವೈರಲ್ ಆಗುತ್ತಿದೆ. ಪುನೀತ್ ಅಭಿಮಾನಿಗಳೆಲ್ಲರೂ ಅದನ್ನ ಈಗ ಶೇರ್ ಮಾಡುತ್ತಿದ್ದಾರೆ.
ಪುನೀತ್ ಮನೆಗೆ ಯಾರೇ ಬಂದ್ರೂ ಸರಿಯೇ. ಅವರನ್ನ ಅಷ್ಟೇ ಪ್ರೀತಿಯಿಂದಲೇ ಪುನೀತ್ ವೆಲ್ ಕಮ್ ಮಾಡಿಕೊಳ್ಳುತ್ತಿದ್ದರು. ಪ್ರತಿ ವರ್ಷ ದೀಪಾವಳಿ ಹಬ್ಬಕ್ಕೆ ರಾಜ್ಯದ ಜನತೆಗೂ ಶುಭ ಹಾರೈಸುತ್ತಿದ್ದರು. ಈ ವರ್ಷ ಆ ಭಾಗ್ಯ ಯಾರಿಗೂ ಇಲ್ಲ. ಹಳೆ ವೀಡಿಯೋವೊಂದನ್ನೇ ಈಗ ಎಲ್ಲರೂ ವೀಕ್ಷಿಸಿ ಪುನೀತ್ ಇದ್ದಿದ್ದರೇ ಹೀಗೇ ಅಲ್ಲವೇ ಶುಭ ಹಾರೈಸುತ್ತಿದದ್ದು ಅಂತ ಬೇಜಾರಿನಿಂದಲೇ ವೀಡಿಯೋ ಶೇರ್ ಮಾಡುತ್ತಿದ್ದಾರೆ. ಹಂಗಾಗಿಯೇ ಈಗ ಆ ಹಳೆ ವೀಡಿಯೋ ವೈರಲ್ ಆಗ್ತಾನೇ ಇದೆ.
Kshetra Samachara
03/11/2021 04:05 pm