ಬೆಂಗಳೂರು: ಇಂದು ಡಾ. ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬ ನಿಮಿತ್ತ ಸಮಾಧಿ ಬಳಿ ಜನಸಾಗರ ಹರಿದು ಬರ್ತಿದೆ. ಸಮಾದಿ ಪೂರ್ತಿಯೂ ಹೂವಿನಿಂದ ಅಲಾಂಕರ ಮಾಡಿದ್ದು,ಲಕ್ಷಾಂತರ ಜನ ಅಪ್ಪುವಿನ ದರ್ಶನ ಮಾಡುತ್ತ ಹೂ ಗಳನ್ನ ತಂದು ಸಮಾದಿಬಳಿ ಇಡುತ್ತಿದ್ದಾರೆ.
ಸ್ಟುಡಿಯೋ ಮುಂದೆ ವಿವಿಧ ಬ್ಲೆಡ್ ಬ್ಯಾಕ್ ಶಿಬಿರಗಳಿಂದ ಬ್ಲೆಡ್ ಕಲೆಕ್ಟ್ ಮಾಡ್ತಿದ್ದು, ಸಾಗರೋಪಾದಿಯಲ್ಲಿ ಅಭಿಮಾನಿಗಳು ರಕ್ತದಾನ ಮಾಡ್ತಿದ್ದಾರೆ.
ಇನ್ನೂ ಅಭಿಮಾನಿಗಳು ಅಪ್ಪುವಿನ ಹೆಸರಿನಲ್ಲಿ ರಕ್ತ ದಾನ ಮಾಡಲು ಕ್ಯೂ ನಿಲ್ಲುತಿದ್ದಾರೆ.. ರಾಜ್ಯ ರಾಜ್ಯಗಳಿಂದ ಕಂಠಿರವ ಸ್ಟುಡಿಯೋ ಬಳಿ ಬಂದು ಅಪ್ಪು ದರ್ಶನ ಮಾಡ್ತಾ, ಅವರ ಆದರ್ಶವನ್ನೆ ನಾವು ಬೆಳೆಸಿಕೊಳ್ಳುತಿದ್ದೇವೆ ನಮ್ಮಿಂದ ಇನ್ನೊಂದು ಜೀವ ಉಳಿಯುತ್ತೆ ಅನ್ನುವ ಮನಸ್ಧಿತಿಯಲ್ಲಿ ರಕ್ತದಾನ ಮಾಡ್ತಿದ್ದೇವೆ ಎಂದು ಅಭಿಮಾನ ತೋರ್ಪಡಿಸಿದ್ದಾರೆ.
ಇನ್ನೂ ಅಭಿಮಾನಿಯಾದ ಲಕ್ಷ್ಮಿ ನಾರಾಯಣ್ ಬಂದಂತಹ ಎಲ್ಲರಿಗೂ ಮೊಸ್ರನ್ನ, ರೈಸ್ ಬಾತ್, ಕೇಸರಿಬಾತ್, ಬಾದುಷಾ, ಎಲ್ಲವನ್ನು ಹಂಚುತ್ತಿದ್ದಾರೆ.ಬೆಳಿಗ್ಗೆ ಇಂದಾನೂ ಅನ್ನದಾಸೋಹ ನಡೆಯುತ್ತಿದೆ.
PublicNext
17/03/2022 06:15 pm