ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡಾ.ರಾಜ್‌ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ರಕ್ತ ದಾನ- ನೇತ್ರ ಪರೀಕ್ಷೆ, ಅಪ್ಪು ಭಾವಚಿತ್ರ ಅನಾವರಣ

ಯಲಹಂಕ: ನಟಸಾರ್ವಭೌಮ, ಪದ್ಮಭೂಷಣ ಡಾ.ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ನಗರದ ಲಿಂಗರಾಜಪುರದಲ್ಲಿ ಗಂಗಾಂಭಿಕ ಕನ್ನಡ ಯುವಕರ ಸಂಘ ರಕ್ತ ದಾನ, ನೇತ್ರಾತಪಾಸಣೆ, ಡಯಾಬಿಟೀಸ್ ಪರೀಕ್ಷೆಗಳನ್ನು ಏರ್ಪಡಿಸಿತ್ತು. ಹಾಗೆಯೇ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರ ಅನಾವರಣ ಮಾಡಲಾಯಿತು. ಸ್ಥಳೀಯ ಶಾಸಕ ಕೆ.ಜೆ.ಜಾರ್ಜ್ ರಾಜ್‌ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುನೀತ್ ರಾಜಕುಮಾರ್ ಅವರ ಭಾವಚಿತ್ರದ ಅನಾವರಣವನ್ನು ನೆರವೇರಿಸಿದರು. ಕನ್ನಡ ರಾಮು ಮತ್ತವರ ಗಂಗಾಂಭಿಕ ಕನ್ನಡ ಯುವಕರ ಸಂಘದ ವತಿಯಿಂದ ಸಾವಿರಾರು ಜನರಿಗೆ ಅನ್ನ ದಾನ ವ್ಯವಸ್ಥೆ ಮಾಡಲಾಗಿತ್ತು.

ಕಳೆದ ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಇಂದು ಡಾ.ರಾಜ್ ಅವರ 93ನೇ ಹುಟ್ಟು ಹಬ್ಬ ಎರಡನ್ನೂ ಇಂದೇ ನಡೆಸಿದ್ದು ಇಲ್ಲಿನ ವಿಶೇಷ. ಯಲಹಂಕ ಲಯನ್ಸ್ ಕ್ಲಬ್ ಮತ್ತು ಗಂಗಾಂಭಿಕ ಯುವಕರ ಸಂಘ ರಕ್ತ ದಾನ ಶಿಬಿರ ಏರ್ಪಡಿಸಿ ಜನರಿಂದ ನೂರು ಯೂನಿಟ್ ರಕ್ತಸಂಗ್ರಹಕ್ಕೆ ನೆರವಾದರು. ಇನ್ನು ನೇತ್ರ ದಾನ ಮತ್ತು ಡಯಾಬಿಟಿಸ್ ಶಿಬಿರದಲ್ಲಿ‌ ನೂರಾರು ಜನ ಭಾಗವಹಿಸಿ ಸೌಲಭ್ಯ ಪಡೆದುಕೊಂಡರು. ಕನ್ನಡ ಭಾಷೆ ಸೇವೆ ಮಾಡಿದ ಡಾ.ರಾಜ್‌ಕುಮಾರ್ ಅವರಿಗೆ ಸೇವೆ ಮಾಡಿದ್ದು ನನ್ನ ಪುಣ್ಯ. ಅವರ ಹೆಸರಿನಲ್ಲಿ ಇಂದು ಅನೇಕ ಜನಪರ ಕೆಲಸಗಳು ಗುತ್ತಿತಲರುವುದಕ್ಕೆ ಖುಷಿ ಆಗ್ತಿದೆ ಅಂತಾರೆ ಕನ್ನಡ ರಾಮು.

ಇದೇ ವೇಳೆ ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಊಟ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು. ಗಂಗಾಂಭಿಕ ಕನ್ನಡ ಸಂಘದ ರುವಾರಿ, ಡಾ.ರಾಜಕುಮಾರ್ ಕುಟುಂಬದ ‌ಜೊತೆ ನೇರ ಸಂಪರ್ಕ ಹೊಂದಿರುವ ಕನ್ನಡ ರಾಮು ರವರ ನೇತೃತ್ವದಲ್ಲಿ ವರ್ಷವಿಡೀ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಬಡವರ ವಿದ್ಯಾಭ್ಯಾಸ, ಹಸಿದವರಿಗೆ ಊಟ, ತಮಿಳು ಪ್ರಾಬಲ್ಯದ ಪ್ರದೇಶಗಳಲ್ಲಿ ಕನ್ನಡ ಭಾಷೆಯನ್ನು ಸಮರ್ಪಕವಾಗಿ ಬಳಸುವ ಮೂಲಕ ಭಾಷೆಯ ಕೆಲಸ ಆಗ್ತದೆ ಎನ್ನುವುದು ಅಭಿಮಾನಿಗಳ ಅಭಿಮತ..

ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ಯಲಹಂಕ

Edited By : Manjunath H D
PublicNext

PublicNext

24/04/2022 10:07 pm

Cinque Terre

45.01 K

Cinque Terre

1

ಸಂಬಂಧಿತ ಸುದ್ದಿ