ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಇಂದು ವಿದೇಶದಿಂದ‌ ಬಂದ 9 ಮಂದಿಯಲ್ಲಿ ಕೊರೊನಾ

ದೇವನಹಳ್ಳಿ: ಇಂದು ಬೆಳಗ್ಗೆ ವಿದೇಶಗಳಿಂದ ಬಂದ 9 ಪ್ರಯಾಣಿಕರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಯೂರೋಪ್, ಅಮೆರಿಕದಿಂದ ಬಂದ ಪ್ರಯಾಣಿಕರಿಗೆ RTPCR ಪರೀಕ್ಷೆ ನಡೆಸಲಾಯಿತು.

ಅದರಲ್ಲಿ ಫ್ರಾನ್ಸ್ ಮೂಲದ ಇಬ್ಬರಿಗೆ, ಅಮೆರಿಕ ಮೂಲದ ಮೂವರಿಗೆ, ಜರ್ಮನಿ ಮೂಲದ ಓರ್ವನಿಗೆ, ಟರ್ಕಿ ಮೂಲದ ಒಬ್ಬನಿಗೆ, ಸ್ವೀಡನ್ ಮೂಲದ ಒಬ್ಬನಿಗೆ ಹಾಗೂ ನೆದರ್ಲೆಂಡ್ಸ್‌ ಮೂಲದ ಒಬ್ಬನಿಗೆ ಕೋವಿಡ್ ಸೋಂಕಿರುವುದು ದೃಢಪಟ್ಟಿದೆ.

ಈ ಒಂಬತ್ತು ಜನರನ್ನು ಹೆಚ್ಚಿನ ತಪಾಸಣೆ ಮತ್ತು ಕ್ವಾರಂಟೈನ್‌ ಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Shivu K
PublicNext

PublicNext

01/01/2022 02:46 pm

Cinque Terre

30.75 K

Cinque Terre

1