ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಓಲಾ, ಉಬರ್ ಬದಲಿಗೆ ಶೀಘ್ರದಲ್ಲೇ ನಗರದಲ್ಲಿ ಹೆಲಿಕಾಪ್ಟರ್​ನಲ್ಲಿ ಹಾರಬಹುದು!

ಬೆಂಗಳೂರಿನ ಜನರಿಗೆ ಸೂಪರ್ ಸುದ್ದಿಯೊಂದು ಇಲ್ಲಿದೆ. ಇನ್ಮೇಲೆ ಬೆಂಗಳೂರಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೆಲಿಕಾಪ್ಟರ್ ಪ್ರಯಾಣ ಮಾಡಬಹುದು. ಅ.10 ರಿಂದ ಬೆಂಗಳೂರಿನ HAL ನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಟ್ರಾ-ಸಿಟಿ ಹೆಲಿಕಾಪ್ಟರ್ ಸೇವೆ ಲಭ್ಯವಾಗಲಿದೆ.

ಈ ಹೆಲಿಕಾಪ್ಟರ್ ಸೇವೆ ವಾರದಲ್ಲಿ ಐದು ದಿನಗಳು ಲಭ್ಯವಿರಲಿದೆ. ಚಾಪರ್ಗಳನ್ನು ನಿರ್ವಹಿಸುವ ಬ್ಲೇಡ್ ಸಂಸ್ಥೆಯು ಈ ಸೇವೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಪ್ರತಿ ಪ್ರಯಾಣಿಕನಿಗೆ 3,250 ರೂ. ಟಿಕೆಟ್ ದರವಿದ್ದು, ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

ಐದು ಸೀಟ್‌ಗಳ ಸಿಂಗಲ್ ಇಂಜಿನ್‌ ಎರಡು ಹೆಲಿಕಾಪ್ಟರ್‌ಗಳು ಈ ಸೇವೆ ಒದಗಿಸಲಿದ್ದು ಬೆಳಗ್ಗೆ 9 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಎಚ್ಎಎಲ್‌ಗೆ ಮತ್ತು ಸಂಜೆ 4.15ಕ್ಕೆ ಅದೇ ಮಾರ್ಗದಲ್ಲಿ ವಿಮಾನ ಹಿಂತಿರುಗಲಿದೆ ಎಂದು ಕಂಪನಿಯು ತಿಳಿಸಿದೆ. ಶೀಘ್ರದಲ್ಲೇ ಬೆಂಗಳೂರಿನಲ್ಲಿ ತನ್ನ

ಇಂಟ್ರಾ-ಸಿಟಿ ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಬ್ಲೇಡ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಒಟ್ಟಿನಲ್ಲಿ ಬೆಂಗಳೂರಿನ ಜನರು ಓಲಾ, ಉಬರ್ ಬದಲಿಗೆ ಶೀಘ್ರದಲ್ಲೇ ನಗರದಲ್ಲಿ ಹೆಲಿಕಾಪ್ಟರ್​ನಲ್ಲಿ ಹಾರಬಹುದು! ಇನ್ನು ಟ್ರಾಫಿಕ್‌ನ ಕಿರಿಕಿರಿ ಇಲ್ಲದೇ15 ನಿಮಿಷಗಳಲ್ಲಿ ಪ್ರಯಾಣ ಬೆಳೆಸಬಹುದೆಂದು ಕಂಪನಿ ಹೇಳಿದೆ.

Edited By : Abhishek Kamoji
Kshetra Samachara

Kshetra Samachara

28/09/2022 04:33 pm

Cinque Terre

3.05 K

Cinque Terre

0

ಸಂಬಂಧಿತ ಸುದ್ದಿ