ಬೆಂಗಳೂರು-ಭಾರತ ಪಾರಂಪರಿಕ ಶೈಲಿಯ ಏಷಿಯ ಜ್ಯುವೆಲ್ಸ್ ವತಿಯಿಂದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ವರಮಹಾಲಕ್ಷ್ಮೀಯ ವಿಗ್ರಹಕ್ಕೆ ಅಭರಣಗಳಿಂದ ಶೃಂಗಾರಿಸಿ,ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕನ್ನಡದ ಖ್ಯಾತ ಚಲನಚಿತ್ರ ನಟಿ ಹರ್ಷಿಕ ಪೂಣ್ಣಚ್ಚ ಮತ್ತು ರೂಪದರ್ಶಿಯರಿಂದ ಅಭರಣಗಳ ಪ್ರದರ್ಶನ ಪೂಜಾ ಕಾರ್ಯಕ್ರಮ ನೇರವೆರಿತು.
ಈ ವೇಳೆ ಚಿತ್ರನಟಿ ಹರ್ಷಿಕ ಪೂಣ್ಣಚ್ಚ ಮಾತನಾಡಿ ಕೊರೊನಾ ಸಾಂಕ್ರಮಿಕ ರೋಗದಿಂದ ಎರಡು ವರ್ಷ ಸಾಕಷ್ಟು ಕಷ್ಟ,ನೋವುಗಳನ್ನು ಅನುಭವಿಸಿದ್ದೇವೆ.ಅದರೆ ಇಂದು ವಾಣಿಜ್ಯ, ವ್ಯಾಪಾರ ವಹಿವಾಟುಗಳು ಆರಂಭವಾಗಿದೆ.ಏಷಿಯ ಜ್ಯುವೆಲರಿ ವತಿಯಿಂದ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಇದೇ ತಿಂಗಳು 29,30,31ನೇ ತಾರೀಖಿನಂದು ಮೂರು ದಿನಗಳ ಕಾಲ ಜ್ಯುವೆಲರಿ ಮೇಳ ನಡೆಯಲಿದೆ.
ಚಿನ್ನ ಮನೆಯಲ್ಲಿ ಇದ್ದರೆ ಚನ್ನಾ ಎಂಬಂತೆ .ಮಹಿಳೆಯರು ಚಿನ್ನ ಖರೀದಿ ಮಾಡಿದರೆ ಅದರ ಮೌಲ್ಯವು ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ.ಮಹಿಳೆಯರಿಗೆ ಅಭರಣಗಳೆಂದರೆ ಅಚ್ಚುಮೆಚ್ಚು, ಮಹಿಳೆಯರಿಗೆ ಅಭರಣವೆ ಶೃಂಗಾರ ಚಿನ್ನ ಖರೀದಿಸಿ ಆರ್ಥಿಕ ಭದ್ರತೆ ಪಡಿಸಿಕೊಳ್ಳಿ.ಜ್ಯುವೆಲರಿ ಪ್ರದರ್ಶನ,ಮಾರಾಟ ಮೇಳದಲ್ಲಿ ಭಾರತದ ಪ್ರಖ್ಯಾತ ಅಭರಣಗಳ ತಯಾರಿಕೆ ಕಂಪನಿಗಳು ಭಾಗವಹಿಸಿಲಿದೆ ಎಂದು ಹೇಳಿದರು.
Kshetra Samachara
25/07/2022 03:34 pm