ವರದಿ : ಗೀತಾಂಜಲಿ
ಬೆಂಗಳೂರು:ರಾಜಧಾನಿಯಲ್ಲಿ ಹೋಟೆಲ್‌ಗಳು 24/7 ತೆಗೆದಿರಬೇಕು.ಹೋಟೆಲ್ ನ್ನ ಜಿ.ಎಸ್.ಟಿ.ಗೆ ವಿನಾಯಿತಿ ಕೊಡಬೇಕು.ಹೀಗೆ ನಾನಾ ಬೇಡಿಕೆಗಳನ್ನ ಇಟ್ಟುಕೊಂಡು ಪೊಲೀಸ್ ಕಮಿಷನರ್ ,ಇಂಡಸ್ಟ್ರಿ ಸೆಕ್ರೆಟರಿಗೆ ಎಷ್ಟೋ ಬಾರಿ ಮನವಿ ಮಾಡಿದ್ರು ಸರಿಯಾಗಿ ಸ್ಪಂದಿಸಿಲ್ಲ.ಹೀಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿಯಾಗಲು ಹೋಟೆಲ್ ಮಾಲೀಕರು ನಿರ್ಧಾರಿಸಿದ್ದಾರೆ.
ನಾನಾ ಬೇಡಿಕೆಗಳನ್ನ ಇಟ್ಟುಕೊಂಡು ಸುಮಾರು 15 ಕ್ಕೂ ಹೆಚ್ಚು ಹೋಟೆಲ್ ಮಾಲೀಕರು ಸಿಎಂ ಭೇಟಿ ಮಾಡಲಿದ್ದಾರೆ. ಗುರುವಾರ ಸಿಎಂ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಿದ್ದೇವೆಂದು ಹೋಟೆಲ್ ಮಾಲೀಕರ ಸಂಘದ ಪಿ.ಸಿ.ರಾವ್ ಮಾಹಿತಿ ನೀಡಿದ್ದಾರೆ.
Kshetra Samachara
12/07/2022 01:10 pm