ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಶ್ವದ ಅತ್ಯುತ್ತಮ ಐಷಾರಾಮಿ ಲಾಂಜ್; ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲಾಂಚ್!

ಬೆಂಗಳೂರು: ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುವ ದೃಷ್ಟಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಶ್ವದಲ್ಲೇ ಅತ್ಯುತ್ತಮ ಲಾಂಜ್ ನಿರ್ಮಿಸಲಾಗಿದೆ. ಇದರಿಂದಾಗಿ ದೇಶಿ-ವಿದೇಶಿ ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯ ಸಿಗಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾಗಿ 14 ವರ್ಷಗಳೇ ಕಳೆದಿವೆ. ಹಲವು ದಾಖಲೆಗಳೊಂದಿಗೆ ವಿಶ್ವದಲ್ಲೇ ಪ್ರಯಾಣಿಕ ಸ್ನೇಹಿ ಎಂಬ ಹೆಗ್ಗಳಿಕೆ KIA ಪಡೆದಿದೆ. ಈ ಮಧ್ಯೆ ಇದೀಗ ವಿಶ್ವದಲ್ಲೇ ಹೊಸ ವಿನ್ಯಾಸದ ಹೈಟೆಕ್ ಲಾಂಜ್ ಅನಾವರಣದಿಂದ ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಲಿದೆ.

"ನಮ್ಮ ರಾಜ್ಯ- ನಮ್ಮ ಹೆಮ್ಮೆ" ಕೆಂಪೇಗೌಡ ವಿಮಾನ ನಿಲ್ದಾಣ. ಇದೀಗ ಎರಡು ವಿಭಿನ್ನ ಐಶಾರಾಮಿ ಲಾಂಜ್ ಅನಾವರಣ‌ ಮಾಡಿದೆ.‌ ವಿಶ್ವದಲ್ಲೇ ಅತ್ಯುತ್ತಮ ಲಾಂಜ್ ಇದಾಗಿದೆ. ಬೆಂಗಳೂರಿನ ಟ್ರಂಕ್ ಡಯಲ್ ನಂಬರ್ 180 ಹೆಸರನ್ನೇ ಈ ಲಾಂಜ್‌ ಗೆ ಇಡಲಾಗಿದೆ.

ಈ ಲಾಂಜ್‌ ಗಳಲ್ಲಿ ಅತ್ಯಾಕರ್ಷಕ ವಿಶ್ರಾಂತಿ ಧಾಮ, ಸೆಲೆಬ್ರೆಟಿ ಶೆಫ್ ಅಭಿಜಿತ್ ಸಹಾ ನೇತೃತ್ವದಲ್ಲಿ ತಯಾರಾಗೋ ತರಹೇವಾರಿ ರಾಸಾಯನಿಕ ಮುಕ್ತ ಊಟ- ತಿಂಡಿ ಜೊತೆಗೆ ಗ್ರಂಥಾಲಯವಿದೆ. ವಿಶೇಷ ಸೀಟಿಂಗ್ ವಲಯ, ಮದ್ಯದಂಗಡಿ, ವಿಶ್ರಾಂತಿಗೆ ಸುಸಜ್ಜಿತ ಆಸನ ಇತ್ಯಾದಿ ಸೌಲಭ್ಯಗಳಿದೆ.

- ಸುರೇಶ್ ಬಾಬು ʼಪಬ್ಲಿಕ್ ನೆಕ್ಸ್ಟ್ʼ ದೇವನಹಳ್ಳಿ

Edited By : Shivu K
PublicNext

PublicNext

09/06/2022 12:09 pm

Cinque Terre

27.94 K

Cinque Terre

1

ಸಂಬಂಧಿತ ಸುದ್ದಿ